ನೂತನ ಸಿಎಂ ಬಸವರಾಜ ಬೊಮ್ಮಾಯಿ ಸಂಪುಟಕ್ಕೆ ಸೇರ್ಪಡೆಯಾಗಿರುವ ಮಂತ್ರಿಗಳ ಪಟ್ಟಿ ಇಂದು ಸಂಜೆ ಬಿಡುಗಡೆಯಾಗಲಿದೆ. ವರಿಷ್ಠರೊಂದಿಗೆ ಸಮಾಲೋಚನೆ ನಡೆಸಿದ ಸಿಎಂ ಬಸವರಾಜ ಬೊಮ್ಮಾಯಿ ಇವತ್ತು ಸಂಜೆ ಪಟ್ಟಿ ಬಿಡುಗಡೆಯಾಗಿದೆ ಮಾಹಿತಿ ನೀಡಿದ್ದಾರೆ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಸಂಭವನೀಯ ಸಚಿವರ ಪಟ್ಟಿಗಳು ಹರಿದಾಡುತ್ತಿವೆ.
ಪಟ್ಟಿಯಲ್ಲಿರುವ ಮಾಹಿತಿಯ ಪ್ರಕಾರ, ಬೊಮ್ಮಾಯಿ ಸಂಪುಟಕ್ಕೆ ಸುನಿಲ್ ಕುಮಾರ್, ಪೂರ್ಣಿಮಾ ಶ್ರೀನಿವಾಸ್, ದತ್ತಾತ್ರೇಯ ಪಾಟೀಲ ರೇವೂರ, ರಾಜುಗೌಡ, ಹಾಲಪ್ಪ ಆಚಾರ್, ಅಭಯ ಪಾಟೀಲ, ರಾಮದಾಸ್, ಹರ್ಷವರ್ಧನ್, ನೆಹರು ಓಲೇಕಾರ, ಮಹೇಶ್ ಕುಮಟಳ್ಳಿ, ಮುನಿರತ್ನ, ಅರವಿಂದ ಬೆಲ್ಲದ, ಬಸವನಗೌಡ ಪಾಟೀಲ್ ಯತ್ನಾಳ್, ಸತೀಶ್ ರೆಡ್ಡಿ, ರವಿಕುಮಾರ್, ಎಸ್. ರುದ್ರೇಗೌಡ ಸೇರಬಹುದೆಂದು ಹೇಳಲಾಗಿದೆ.
ಇವರೊಂದಿಗೆ ಗೋವಿಂದ ಕಾರಜೋಳ, ಸಿ.ಎನ್. ಅಶ್ವತ್ಥನಾರಾಯಣ, ಬಿ. ಶ್ರೀರಾಮುಲು, ಆರ್. ಅಶೋಕ, ಉಮೇಶ್ ಕತ್ತಿ, ಜೆ.ಸಿ. ಮಧುಸ್ವಾಮಿ ಮುಂದುವರೆಬಹುದು. ಜಗದೀಶ್ ಶೆಟ್ಟರ್, ಶಶಿಕಲಾ ಜೊಲ್ಲೆ ಮೊದಲಾದವರು ಸಂಪುಟದಿಂದ ಹೊರಗುಳಿಯಬಹುದು ಎನ್ನಲಾಗಿದೆ.
ಇವುಗಳ ಜೊತೆಗೆ ಮತ್ತೊಂದು ಪಟ್ಟಿಯೂ ಸಾಮಾಜಿಕ ಜಾಲತಾಣದಲ್ಲಿ ಹರಿದಾಡತೊಡಗಿದೆ. ಆರ್. ಅಶೋಕ್, ಬಿ. ಶ್ರೀರಾಮುಲು, ಅರವಿಂದ ಲಿಂಬಾವಳಿ, ಅಶ್ವತ್ಥನಾರಾಯಣ, ಮಾಧುಸ್ವಾಮಿ, ಮುರುಗೇಶ ನಿರಾಣಿ, ಅರವಿಂದ ಬೆಲ್ಲದ, ಬಸವನಗೌಡ ಪಾಟೀಲ ಯತ್ನಾಳ್, ಬಾಲಚಂದ್ರ ಜಾರಕಿಹೊಳಿ, ಬೈರತಿ ಬಸವರಾಜ, ಎಸ್.ಟಿ. ಸೋಮಶೇಖರ್, ಡಾ.ಕೆ. ಸುಧಾಕರ್, ಕೆ. ಗೋಪಾಲಯ್ಯ, ಉಮೇಶ್ ಕತ್ತಿ, ರಾಮದಾಸ್, ಪಿ. ರಾಜೀವ್, ಬೋಪಯ್ಯ, ಬಿ.ಸಿ. ಪಾಟೀಲ್, ಕೋಟ ಶ್ರೀನಿವಾಸ ಪೂಜಾರಿ, ದತ್ತಾತ್ರೇಯ ಪಾಟೀಲ, ಶಿವನಗೌಡ ನಾಯಕ್, ಸುನಿಲ್ ಕುಮಾರ್, ತಿಪ್ಪಾರೆಡ್ಡಿ, ಪೂರ್ಣಿಮಾ ಶ್ರೀನಿವಾಸ್, ರೇಣುಕಾಚಾರ್ಯ, ಎಂ.ಪಿ. ಕುಮಾರಸ್ವಾಮಿ, ರಾಜುಗೌಡ ಮೊದಲಾದವರ ಹೆಸರಿನ ಪಟ್ಟಿ ಜಾಲತಾಣಗಳಲ್ಲಿ ಹರಿದಾಡಿದೆ ಎಂದು ಹೇಳಲಾಗಿದೆ.