ಬೆಂಗಳೂರು: ಉಪ ಚುನಾವಣೆ ಮುಗಿಯುತ್ತಿದ್ದಂತೆ ಸಚಿವ ಸಂಪುಟಕ್ಕೆ ಸರ್ಜರಿ ಕೈಗೊಳ್ಳಲಿದ್ದು, ನಾಲ್ವರು ಹಾಲಿ ಸಚಿವರಿಗೆ ಕೊಕ್ ನೀಡಲಾಗುವುದು. 8 ಸಚಿವ ಸ್ಥಾನ ಭರ್ತಿ ಮಾಡಿಕೊಳ್ಳಲಾಗುವುದು. ನಾಲ್ವರು ಹಾಲಿ ಸಚಿವರನ್ನು ಕೈಬಿಟ್ಟು, 8 ಸ್ಥಾನಗಳಿಗೆ ಪಕ್ಷ ನಿಷ್ಠರು ಮತ್ತು ಪರಿವಾರದ ಮೂಲದವರಿಗೂ ಆದ್ಯತೆ ನೀಡಲಾಗುವುದು ಎಂದು ಹೇಳಲಾಗಿದೆ
ಸಚಿವ ಸಂಪುಟಕ್ಕೆ ಚುರುಕು ಮುಟ್ಟಿಸಲು ಸಚಿವರ ಮೌಲ್ಯಮಾಪನ ನಡೆಸುವಂತೆ ಹೈಕಮಾಂಡ್ ಸೂಚನೆ ನೀಡಿದೆ. ಹಾನಗಲ್, ಸಿಂದಗಿ ಕ್ಷೇತ್ರಗಳ ಉಪಚುನಾವಣೆ ಮುಗಿಯುವ ವೇಳೆಗೆ ಸಂಪುಟ ವಿಸ್ತರಣೆಗೆ ಸಮಯ ನಿಗದಿ ಮಾಡಿಕೊಳ್ಳಲಾಗುತ್ತಿದೆ. ಬೊಮ್ಮಾಯಿ ಮುಖ್ಯಮಂತ್ರಿಯಾಗಿ 100 ದಿನಗಳಾಗುವ ಹೊತ್ತಲ್ಲಿ ಸಂಪುಟ ವಿಸ್ತರಣೆ ಮಾಡಲಾಗುವುದು. ಮುಂದಿನ ಜಿಪಂ, ತಾಪಂ ಚುನಾವಣೆ, ಪಕ್ಷ ಸಂಘಟನೆ ದೃಷ್ಠಿಯಲ್ಲಿಟ್ಟುಕೊಂಡು ಸಂಪುಟ ವಿಸ್ತರಣೆ ಮಾಡಲಾಗುವುದು ಎನ್ನಲಾಗಿದೆ.