ಮಣ್ಣಿಗೆ ಅಥವಾ ಭೂಮಿಗೆ ಮದ್ಯವನ್ನು ಅರ್ಪಿಸುವ ಮೂಲಕ ಭೂಮಿ ತಾಯಿಯನ್ನು ಪೂಜಿಸುವ ಆಚರಣೆಯ ಬಗ್ಗೆ ಪಟೇಲ್ ಅವರಿಗೆ ಬಹುಷಃ ತಿಳಿದಿರಲಿಲ್ಲ ಎನ್ನಲಾಗಿದೆ. ಆಗಸ್ಟ್ 9 ರಂದು ವಿಶ್ವ ಬುಡಕಟ್ಟು ದಿನವನ್ನು ಆಚರಿಸಲು ಗುಜರಾತ್‌ನ ದೇಡಿಯಾಪಾಡಾದಲ್ಲಿರುವ ಆದರ್ಶ ವಿದ್ಯಾರ್ಥಿ ಶಾಲೆಯಲ್ಲಿ ಗಣ್ಯರು, ಬುಡಕಟ್ಟು ಮುಖಂಡ ಎಲೆಯಲ್ಲಿ ಮದ್ಯವನ್ನು ನೀಡಿದರು.
ಬಿಜೆಪಿ ಶಾಸಕ ಮೋತಿಲಾಲ್ ವಾಸವ, ಬಿಜೆಪಿ ಮುಖಂಡ ಶಂಕರ್ ವಾಸವ ಮತ್ತು ಇತರ ಕೆಲವು ಪಕ್ಷದ ಮುಖಂಡರು ಭೂಮಿಗೆ ನೈವೇದ್ಯವಾಗಿ ಮದ್ಯವನ್ನು ಸುರಿದರು. ಆದರೆ, ಸಚಿವ ಪಟೇಲ್ ಇದ್ಯಾವುದನ್ನು ಗಮನಿಸದೆ ಮದ್ಯವನ್ನು ಕುಡಿದುಬಿಟ್ಟರು.
ಬುಡಕಟ್ಟು ಸಮುದಾಯದ ಹೆಚ್ಚಿನ ಆಚರಣೆಗಳು ಮತ್ತು ಹಬ್ಬಗಳಲ್ಲಿ ಭೂಮಿಗೆ ಮದ್ಯವನ್ನು ಅರ್ಪಿಸುವುದು ವಾಡಿಕೆ. ಇನ್ನು ವಿಡಿಯೋ ವೈರಲ್ ಆಗುತ್ತಿದ್ದಂತೆ ಪ್ರತಿಕ್ರಿಯಿಸಿದ ಸಚಿವರು, ನನಗೆ ಬುಡಕಟ್ಟು ಸಂಪ್ರದಾಯಗಳ ಬಗ್ಗೆ ತಿಳಿದಿಲ್ಲ. ಇದು ನನ್ನ ಮೊದಲ ಭೇಟಿಯಾಗಿದೆ. ನಮ್ಮ ಆಚರಣೆಗಳಲ್ಲಿ ನಮಗೆ ಚರ್ನಾಮೃತವನ್ನು ಅರ್ಪಿಸಿದಾಗ ನಾವು ಅದನ್ನು ಸೇವಿಸುತ್ತೇವೆ ಎಂದು ಹೇಳಿದರು. ನನ್ನ ಜ್ಞಾನದ ಕೊರತೆಯಿಂದಾಗಿ ನಾನು ಭೂಮಿಗೆ ಅರ್ಪಿಸುವ ಬದಲು ಕುಡಿದುಬಿಟ್ಟೆ ಎಂದು ಹೇಳಿದ್ರು.