ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಇಂದು ನಡೆದ ಹೈವೋಲ್ಟೇಜ್ ಸಂಪುಟ ಸಭೆಯಲ್ಲಿ ಹಲವು ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ.
ಸಂಪುಟ ಸಭೆಯ ನಂತರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ. 2ಸಿ ಗೆ ಶೇಕಡ 6ರಷ್ಟು ಹಾಗೂ 2ಡಿ ಗೆ ಶೇಕಡ 7 ರಷ್ಟು ಮೀಸಲಾತಿ ನೀಡಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಪರಿಶಿಷ್ಟ ಜಾತಿಯ ಬಲ ಸಮುದಾಯಕ್ಕೆ ಶೇಕಡ 5.5, ಭೋವಿ, ಲಂಬಾಣಿ ಸಮುದಾಯಕ್ಕೆ ಶೇಕಡ 4.5 ರಷ್ಟು ಮೀಸಲಾತಿ ಹಂಚಿಕೆ ಮಾಡಲಾಗಿದೆ. ಎಲೆಕ್ಷನ್ ಸಂದರ್ಭದಲ್ಲಿ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಲಿಂಗಾಯಿತ ಸಮುದಾಯಕ್ಕೆ ಶೇ. 7 ರಷ್ಟು, ಒಕ್ಕಲಿಗ ಸಮುದಾಯಕ್ಕೆ 6 ಪರ್ಸೆಂಟ್ ಮೀಸಲಾತಿ ನೀಡಲಾಗಿದೆ.
ಎಸ್.ಸಿ. ಸಮುದಾಯದ ಮೀಸಲಾತಿಯಲ್ಲಿ ಒಳಮೀಸಲಾತಿ ಪ್ರಕಟಿಸಲಾಗಿದ್ದು, ಎಡಗೈ ಶೇ. 6, ಬಲಗೈ ಶೇ. 5.5 ರಷ್ಟು ಮೀಸಲಾತಿ ಪ್ರಕಟಿಸಲಾಗಿದೆ.
ಮುಸ್ಲಿಮರ ಶೇಕಡ 4 ರಷ್ಟು ಮೀಸಲಾತಿಗೆ ಕೊಕ್ ನೀಡಲಾಗಿದೆ. ಇತರೆ ದಲಿತ ಅಲೆಮಾರಿ ಸಮುದಾಯಕ್ಕೆ ಶೇಕಡ 1 ರಷ್ಟು ಮೀಸಲಾತಿ ಹಂಚಿಕೆ ಮಾಡಲಾಗಿದೆ.
ಧಾರ್ಮಿಕ ಅಲ್ಪಸಂಖ್ಯಾತರಿಗೆ 2 ಬಿ ಮೀಸಲಾತಿ ಇಲ್ಲ. ಹಿಂದುಳಿದ ವರ್ಗದಲ್ಲಿ ಒಂದೇ ಕೆಟಗರಿ ಮಾಡಲು ತೀರ್ಮಾನಿಸಲಾಗಿದೆ. ಎಸ್.ಟಿ. ಸಮುದಾಯದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಲಾಗುತ್ತದೆ.
ಆರ್ಟಿಕಲ್ 342ರ ಅನ್ವಯ 4 ಗುಂಪುಗಳಲ್ಲಿ ವರ್ಗೀಕರಣ ಮಾಡಿದ್ದರು
ಗುಂಪು 1 ಆದಿ ಜಾಂಬವ ಸಮುದಾಯಕ್ಕೆ ಶೇಕಡ 6 ಮೀಸಲಾತಿ
ಗುಂಪು 2 ಆದಿ ಕರ್ನಾಟಕ ಸಮುದಾಯಕ್ಕೆ ಶೇಕಡ 5.5ರಷ್ಟು ಮೀಸಲಾತಿ
ಗುಂಪು 3 ಬಂಜಾರ, ಭೋವಿ, ಕೊರಚರಿಗೆ ಶೇಕಡ 4.5 ರಷ್ಟು ಮೀಸಲಾತಿ
ಗುಂಪು 4 ರಲ್ಲಿರುವ ಮತ್ತಿತರರಿಗೆ ಶೇಕಡ 1ರಷ್ಟು ಮೀಸಲಾತಿಗೆ ನಿರ್ಧಾರ ಕೈಗೊಳ್ಳಲಾಗಿದೆ.