
ನವದೆಹಲಿ: ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ(ಎನ್.ಎಫ್.ಎಸ್.ಎ.) ಸಮಗ್ರ ಮಕ್ಕಳ ಅಭಿವೃದ್ಧಿ ಸೇವೆಗಳು (ಐ.ಸಿ.ಡಿ.ಎಸ್.) ಪ್ರಧಾನ ಮಂತ್ರಿ ಪೋಷಣ್ ಶಕ್ತಿ ಅಡಿಯಲ್ಲಿ ಉದ್ದೇಶಿತ ಸಾರ್ವಜನಿಕ ವಿತರಣಾ ವ್ಯವಸ್ಥೆ(ಟಿಪಿಡಿಎಸ್)ಯಡಿ ಸಾರವರ್ಧಿತ ಅಕ್ಕಿಯನ್ನು ವಿತರಿಸುವ ಪ್ರಸ್ತಾವನೆಗೆ ಆರ್ಥಿಕ ವ್ಯವಹಾರಗಳ ಕೇಂದ್ರ ಸಂಪುಟ ಸಮಿತಿ ಶುಕ್ರವಾರ ಅನುಮೋದನೆ ನೀಡಿದೆ.
ಹಂತ ಹಂತವಾಗಿ 2024 ರ ವೇಳೆಗೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಭಾರತ ಸರ್ಕಾರದ ನಿರ್ಮಾಣ-PM ಪೋಶನ್ (ಹಿಂದಿನ ಮಧ್ಯಾಹ್ನದ ಊಟ ಯೋಜನೆ (MDM)) ಮತ್ತು ಇತರ ಕಲ್ಯಾಣ ಯೋಜನೆಗಳಡಿ ಸಾರವರ್ಧಿತ ಅಕ್ಕಿ ವಿತರಿಸಲಾಗುವುದು.
ಸಂಪುಟದ ನಿರ್ಧಾರಗಳ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಕೇಂದ್ರ ಸಚಿವ ಅನುರಾಗ್ ಠಾಕೂರ್, ಭಾರತೀಯ ಆಹಾರ ನಿಗಮ(ಎಫ್.ಸಿ.ಐ.) ಮತ್ತು ರಾಜ್ಯ ಏಜೆನ್ಸಿಗಳು ಈಗಾಗಲೇ ವಿತರಣೆ ಮತ್ತು ಪೂರೈಕೆಗಾಗಿ 88.65 ಲಕ್ಷ ಮೆಟ್ರಿಕ್ ಟನ್(ಎಲ್.ಎಂ.ಟಿ.) ಅಕ್ಕಿಯನ್ನು ಸಂಗ್ರಹಿಸಿವೆ. ಆಗಸ್ಟ್ 15, 2021 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಈ ಬಗ್ಗೆ ಘೋಷಿಸಿದ್ದರು. ಉದ್ದೇಶಿತ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮೂಲಕ ಬಲವರ್ಧಿತ ಅಕ್ಕಿಯನ್ನು ವಿತರಿಸಲು ಕ್ಯಾಬಿನೆಟ್ ಅನುಮೋದನೆ ನೀಡಿದೆ ಎಂದು ಹೇಳಿದರು.
2024 ರ ಜೂನ್ ವರೆಗೆ ಸಂಪೂರ್ಣ ಅನುಷ್ಠಾನಗೊಳಿಸಲಾಗುವುದು. ಸಂಪೂರ್ಣ ವೆಚ್ಚವನ್ನು(ವರ್ಷಕ್ಕೆ 2,700 ಕೋಟಿ ರೂ.) ಸರ್ಕಾರ ಭರಿಸಲಿದೆ.
ಮೂರು ಹಂತಗಳಲ್ಲಿ ಜಾರಿ
ಹಂತ-I: ಮಾರ್ಚ್, 2022 ರ ವೇಳೆಗೆ ಭಾರತದಲ್ಲಿ ICDS ಮತ್ತು PM POSHAN ಯೋಜನೆಯಡಿ ಅಕ್ಕಿ ವಿತರಿಸಲಾಗುವುದ.
ಹಂತ-II: ಮೇಲಿನ ಹಂತ I ಜೊತೆಗೆ TPDS ಮತ್ತು OWS ಜಿಲ್ಲೆಗಳಲ್ಲಿ ಮಾರ್ಚ್ 2023 ರ ವೇಳೆಗೆ(ಒಟ್ಟು 291 ಜಿಲ್ಲೆಗಳು) ಜಾರಿ ಮಾಡಲಾಗುವುದು.
ಹಂತ-III ಮೇಲಿನ ಹಂತ II ಜೊತೆಗೆ ಮಾರ್ಚ್ 2024 ರೊಳಗೆ ದೇಶದ ಉಳಿದ ಜಿಲ್ಲೆಗಳಲ್ಲೂ ಯೋಜನೆಯಡಿ ಅಕ್ಕಿ ವಿತರಿಸಲಾಗುವುದು.
ಕೇಂದ್ರ ಪ್ರಾಯೋಜಿತ ಪ್ರಾಯೋಗಿಕ ಯೋಜನೆ ಇದಾಗಿದ್ದು, 2019-20 ರಿಂದ 3 ವರ್ಷಗಳ ಅವಧಿಗೆ ಜಾರಿಗೆ ತರಲಾಯಿತು. 11 ರಾಜ್ಯಗಳಲ್ಲಿ ಪ್ರಾಯೋಗಿಕ ಯೋಜನೆಯಡಿಯಲ್ಲಿ ಗುರುತಿಸಲಾದ ಜಿಲ್ಲೆಗಳಲ್ಲಿ (ಪ್ರತಿ ರಾಜ್ಯಕ್ಕೆ ಒಂದು ಜಿಲ್ಲೆ) ಸಾರವರ್ಧಿತ ಅಕ್ಕಿಯನ್ನು ಯಶಸ್ವಿಯಾಗಿ ವಿತರಿಸಲಾಗಿದೆ.