ನವದೆಹಲಿ: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್(HAL) ನಿಂದ ಭಾರತೀಯ ವಾಯುಪಡೆಯ Su-30MKI ವಿಮಾನಕ್ಕಾಗಿ 240 ಏರೋ-ಎಂಜಿನ್ಗಳನ್ನು(AL-31FP) 26,000 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಖರೀದಿಸಲು ಭದ್ರತಾ ಕ್ಯಾಬಿನೆಟ್ ಸಮಿತಿಯು ಅನುಮೋದನೆ ನೀಡಿದೆ.
ರಕ್ಷಣಾ ಸಚಿವಾಲಯ ಈ ಬಗ್ಗೆ ಮಾಹಿತಿ ನೀಡಿದ್ದು, ಈ ಎಂಜಿನ್ಗಳನ್ನು HAL ನಿಂದ “ಖರೀದಿ(ಭಾರತೀಯ)” ವರ್ಗದ ಅಡಿಯಲ್ಲಿ ಸ್ವಾಧೀನಪಡಿಸಿಕೊಳ್ಳಲಾಗುತ್ತದೆ.
ಈ ಏರೋ-ಎಂಜಿನ್ಗಳು ಒಂದು ವರ್ಷದ ನಂತರ ಪ್ರಾರಂಭವಾಗಿ ಎಂಟು ವರ್ಷಗಳ ಅವಧಿಯಲ್ಲಿ ಪೂರ್ಣಗೊಳ್ಳುತ್ತವೆ. ಸೆಪ್ಟೆಂಬರ್ 2 ರಂದು ಭದ್ರತೆಯ ಕ್ಯಾಬಿನೆಟ್ ಸಮಿತಿಯು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್(HAL) ನಿಂದ ಖರೀದಿ(ಭಾರತೀಯ) ವರ್ಗದ ಅಡಿಯಲ್ಲಿ ಭಾರತೀಯ ವಾಯುಪಡೆಯ(IAF) Su-30MKI ವಿಮಾನಕ್ಕಾಗಿ 240 ಏರೋ-ಎಂಜಿನ್ಗಳನ್ನು(AL-31FP) ಖರೀದಿಸುವ ಪ್ರಸ್ತಾಪವನ್ನು ಅನುಮೋದಿಸಿತು. ಎಲ್ಲಾ ತೆರಿಗೆಗಳು ಮತ್ತು ಸುಂಕಗಳನ್ನು ಒಳಗೊಂಡಂತೆ 26,000 ಕೋಟಿ ರೂ. ವೆಚ್ಚವಾಗಲಿದೆ
Su-30MKI ಅತ್ಯಂತ ಶಕ್ತಿಶಾಲಿ ಫೈಟರ್ ಜೆಟ್
AL-31FP ಇಂಜಿನ್ಗಳು ಶೇಕಡಾ 54 ಕ್ಕಿಂತ ಹೆಚ್ಚು ಸ್ಥಳೀಯ ತಯಾರಿಕೆ ಹೊಂದಿರುತ್ತದೆ, ಇವುಗಳನ್ನು ಹೆಚ್ಎಎಲ್ನ ಕೊರಾಪುಟ್ ವಿಭಾಗದಲ್ಲಿ ತಯಾರಿಸಲಾಗುವುದು.
Su-30MKI ಭಾರತೀಯ ವಾಯುಪಡೆಯ(IAF) ಅತ್ಯಂತ ಶಕ್ತಿಶಾಲಿ ಮತ್ತು ಕಾರ್ಯತಂತ್ರವಾಗಿ ಮಹತ್ವದ ಫೈಟರ್ ಜೆಟ್ ಫ್ಲೀಟ್ ಆಗಿದೆ. ಹೆಚ್ಎಎಲ್ನಿಂದ ಈ ಏರೋ-ಎಂಜಿನ್ಗಳ ಪೂರೈಕೆಯು ತಮ್ಮ ಅಡೆತಡೆಯಿಲ್ಲದ ಕಾರ್ಯಾಚರಣೆಯನ್ನು ಮುಂದುವರಿಸಲು ಮತ್ತು ದೇಶದ ರಕ್ಷಣಾ ವ್ಯವಸ್ಥೆ ಬಲಪಡಿಸಲು ನೆರವಾಗಲಿದೆ.