ಬುಧವಾರ, ಸಚಿವ ಸಂಪುಟ ಸಭೆ ನಡೆದಿದೆ. ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳ ಬಗ್ಗೆ ಕೇಂದ್ರ ಸಚಿವರಾದ ಪಿಯೂಷ್ ಗೋಯಲ್ ಮತ್ತು ಅನುರಾಗ್ ಠಾಕೂರ್ ಮಾಹಿತಿ ನೀಡಿದ್ದಾರೆ. ಬೃಹತ್ ಜವಳಿ ಪಾರ್ಕ್ ಸ್ಥಾಪಿಸಲು, 4,445 ಕೋಟಿ ರೂಪಾಯಿಗಳ ಪಿಎಂ ಮಿತ್ರ ಯೋಜನೆಗೆ ಕ್ಯಾಬಿನೆಟ್ ಅನುಮೋದನೆ ನೀಡಿದೆ.
ದೇಶದಲ್ಲಿ ಪಿಎಂ ಮಿತ್ರ ಯೋಜನೆ ಶುರುವಾಗಲಿದೆ. ಇದು ಜವಳಿ ಮತ್ತು ಉಡುಪು ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡಲಿದೆ. ಇದು ಲಕ್ಷಾಂತರ ಜನರಿಗೆ ಉದ್ಯೋಗ ನೀಡಲಿದೆ. ಈ ಯೋಜನೆಯಿಂದ, ಜವಳಿ ಕ್ಷೇತ್ರದಲ್ಲಿ 21 ಲಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ. ಇವುಗಳಲ್ಲಿ 7 ಲಕ್ಷ ನೇರ ಮತ್ತು 14 ಲಕ್ಷ ಪರೋಕ್ಷ ಎಂದು ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.
ಹೂಡಿಕೆ ಹಣ ದ್ವಿಗುಣಗೊಳ್ಳುವುದು ಹೇಗೆ….? `72ರ ನಿಯಮ’ದಡಿ ಲೆಕ್ಕ ಮಾಡಿ
ಈ ಯೋಜನೆ ಉತ್ಪಾದನೆ ಮತ್ತು ರಫ್ತು ಕೇಂದ್ರಿತ ಬೆಳವಣಿಗೆಗೆ ಕಾರಣವಾಗಲಿದೆ. ಮುಂದಿನ 5 ವರ್ಷಗಳಲ್ಲಿ 4,445 ಕೋಟಿ ಖರ್ಚು ಮಾಡಲಾಗುವುದು ಎಂದು ಗೋಯಲ್ ಹೇಳಿದ್ದಾರೆ. ಕೇಂದ್ರ ಪಿಎಂ ಮಿತ್ರ ಯೋಜನೆಯಡಿ, ನೂಲುವಿಕೆ, ನೇಯ್ಗೆ, ಸಂಸ್ಕರಣೆ, ಬಣ್ಣ ಮತ್ತು ಮುದ್ರಣದಿಂದ ಬಟ್ಟೆಗಳ ತಯಾರಿಕೆಯವರೆಗೆ ಎಲ್ಲ ಕೆಲಸ ಒಂದೇ ಸ್ಥಳದಲ್ಲಿ ನಡೆಯಲಿದೆ. ಇದ್ರಿಂದ ಲಾಜಿಸ್ಟಿಕ್ಸ್ ವೆಚ್ಚ ಕಡಿಮೆಯಾಗಲಿದೆ. ಎಲ್ಲ ಕೆಲಸ ಒಂದೇ ಸ್ಥಳದಲ್ಲಿ ನಡೆಯುವುದ್ರಿಂದ ಲಾಜಿಸ್ಟಿಕ್ಸ್ ವೆಚ್ಚ ಕಡಿಮೆಯಾಗುತ್ತದೆ ಎಂದು ಸರ್ಕಾರ ನಂಬಿದೆ.
Shocking: ಬಿಗಿಯಾದ ಜೀನ್ಸ್ ಧರಿಸಿ ಆಸ್ಪತ್ರೆ ಸೇರಿದ ಹುಡುಗಿ…!
ವಿವಿಧ ರಾಜ್ಯಗಳಲ್ಲಿ,ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಮಿತ್ರ ಪಾರ್ಕ್ ರಚನೆಯಾಗಲಿದೆ. ಮಿತ್ರ ಪಾರ್ಕ್‌ಗಳನ್ನು ವಿವಿಧ ರಾಜ್ಯಗಳಲ್ಲಿರುವ ಗ್ರೀನ್‌ಫೀಲ್ಡ್ ಅಥವಾ ಬ್ರೌನ್ ಫೀಲ್ಡ್ ಸ್ಥಳಗಳಲ್ಲಿ ನಿರ್ಮಿಸಲಾಗುವುದು. ಎಲ್ಲಾ ಗ್ರೀನ್‌ಫೀಲ್ಡ್ ಮಿತ್ರ ಪಾರ್ಕ್‌ಗಳನ್ನು ಅಭಿವೃದ್ಧಿಪಡಿಸಲು 500 ಕೋಟಿ ರೂಪಾಯಿ ಬೆಂಬಲ ನೀಡಲಾಗುವುದು. ಸರ್ಕಾರದ ಪ್ರಕಾರ, ಬ್ರೌನ್ ಫೀಲ್ಡ್ ಮಿತ್ರ ಪಾರ್ಕ್ ಗಳ ಅಭಿವೃದ್ಧಿಗೆ 200 ಕೋಟಿ ರೂಪಾಯಿ ನೀಡಲಾಗುವುದು ಎಂದವರು ಹೇಳಿದ್ದಾರೆ.
ಇಂದು ಕ್ಯಾಬಿನೆಟ್ ಸಭೆಯಲ್ಲಿ, ಎರಡು ಇಲಾಖೆಗಳ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಈ ವರ್ಷವೂ ರೈಲ್ವೇಯ ಗೆಜೆಟೆಡ್ ಅಲ್ಲದ ಉದ್ಯೋಗಿಗಳಿಗೆ 78 ದಿನಗಳ ಬೋನಸ್ ನೀಡಲಾಗುವುದು ಎಂದು ಪಿಯೂಷ್ ಗೋಯಲ್ ಹೇಳಿದ್ದಾರೆ.