ಕೊರೊನಾ ನಂತ್ರ ಜನರ ಆಲೋಚನೆ ಬದಲಾಗಿದೆ. ಕಂಪನಿ ಕೆಲಸಕ್ಕಿಂತ ಸ್ವಂತ ಉದ್ಯೋಗ ಶುರು ಮಾಡಲು ಜನರು ಆಸಕ್ತಿ ತೋರುತ್ತಿದ್ದಾರೆ. ಇನ್ನೂ ಕೆಲವರು ಹೆಚ್ಚುವರಿ ಆದಾಯದ ಮೂಲ ಹುಡುಕುತ್ತಿದ್ದಾರೆ. ಅಂಥವರಲ್ಲಿ ನೀವೂ ಒಬ್ಬರಾಗಿದ್ದರೆ ವಾಲ್‌ಮಾರ್ಟ್ ಒಡೆತನದ ಫ್ಲಿಪ್ಕಾರ್ಟ್‌ಗೆ ಸೇರಿಕೊಳ್ಳಬಹುದು.
ಪ್ರತಿ ತಿಂಗಳು ಹಣ ಗಳಿಸಲು ಇಲ್ಲಿ ಅವಕಾಶ ನೀಡಲಾಗ್ತಿದೆ. ಫ್ಲಿಪ್ಕಾರ್ಟ್ ಜೊತೆ ಕೈಜೋಡಿಸಲು ನೀವು ಯಾವುದೇ ರೀತಿಯ ಶುಲ್ಕ ಪಾವತಿಸಬೇಕಾಗಿಲ್ಲ. ಮನೆಯಲ್ಲೇ ಕುಳಿತು ನೀವು ವ್ಯವಹಾರ ಪ್ರಾರಂಭಿಸಬಹುದು
ಅಕ್ರಮ –ಸಕ್ರಮ ಯೋಜನೆಯಡಿ 15 ಲಕ್ಷ ಜನರಿಗೆ ಗುಡ್ ನ್ಯೂಸ್: ಸರ್ಕಾರದಿಂದ ಮಹತ್ವದ ಕ್ರಮ.
ವಾಲ್‌ಮಾರ್ಟ್, ವೃದ್ಧಿ ಕಾರ್ಯಕ್ರಮ, ಆನ್‌ಲೈನ್ ಮೂಲಕ ವ್ಯವಹಾರ ಮಾಡಬಯಸುವವರಿಗೆ ನೆರವಾಗ್ತಿದೆ. ವಾಲ್‌ಮಾರ್ಟ್ ವೃದ್ಧಿ ಕಾರ್ಯಕ್ರಮವನ್ನು ಆನ್‌ಲೈನ್ ವ್ಯಾಪಾರಿಗಳಿಗಾಗಿ ವಿನ್ಯಾಸಗೊಳಿಸಲಾಗಿದೆ.
ವಾಲ್ಮಾರ್ಟ್ ವೃದ್ಧಿ ಇ-ಇನ್ಸ್ಟಿಟ್ಯೂಟ್ ದೆಹಲಿ, ಹರಿಯಾಣ, ಉತ್ತರ ಪ್ರದೇಶ, ಉತ್ತರಾಖಂಡ, ಚೆನ್ನೈ ಮತ್ತು ಇತರ ಕೆಲವು ರಾಜ್ಯಗಳಲ್ಲಿ ಶುರುವಾಗಿದೆ. ಆಂಡ್ರಾಯ್ಡ್ ಮತ್ತು ಐಒಎಸ್‌ನಲ್ಲಿ ಲಭ್ಯವಿರುವ ಮೊಬೈಲ್ ಆಪ್‌ಗಳ ಮೂಲಕ ಅರ್ಹ ಎಂಎಸ್‌ಎಂಇಗಳು ಇಂಗ್ಲಿಷ್ ಮತ್ತು ಹಿಂದಿ ಎರಡರಲ್ಲೂ ಡಿಜಿಟಲ್ ತರಬೇತಿ ಪಡೆಯಬಹುದು.
ವಾಲ್ಮಾರ್ಟ್ ವೃದ್ಧಿ ಕಾರ್ಯಕ್ರಮವನ್ನು, ವಾಲ್ಮಾರ್ಟ್ ಡಿಸೆಂಬರ್ 2019 ರಲ್ಲಿ ಆರಂಭಿಸಿದೆ. ಮೇಕ್ ಇನ್ ಇಂಡಿಯಾ ಅಡಿಯಲ್ಲಿ ಸಣ್ಣ ಹಾಗೂ ಮಧ್ಯಮ ವ್ಯಾಪಾರಿಗಳನ್ನು, ದೇಶೀಯ ಮತ್ತು ವಿದೇಶಿ ಪೂರೈಕೆ ಸರಪಳಿಗಳೊಂದಿಗೆ ಸೇರಿಸುವುದು ಇದ್ರ ಉದ್ದೇಶವಾಗಿದೆ. ಇದಕ್ಕಾಗಿ ಮೊದಲು ಹೆಸರು ನೋಂದಾಯಿಸಬೇಕು. Walmartvriddhi.org ವೆಬ್‌ಸೈಟ್‌ಗೆ ಹೋಗಬೇಕು. ಬಲಭಾಗದಲ್ಲಿರುವ ಉಚಿತವಾಗಿ ಸೈನ್ ಅಪ್ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ವ್ಯಾಪಾರದ ಹೆಸರು, ವ್ಯಾಪಾರದ ಪ್ರಕಾರ, ಉತ್ಪನ್ನ ವಿಭಾಗ, ವ್ಯಾಪಾರ ಕೇಂದ್ರ, ಜಿಲ್ಲೆ, ನಿಮ್ಮ ಹೆಸರು, ಮೊಬೈಲ್ ಸಂಖ್ಯೆ, ಇಮೇಲ್ ಐಡಿ ಇತ್ಯಾದಿಗಳ ಮಾಹಿತಿ ನೀಡಬೇಕಾಗುತ್ತದೆ. ಇದರ ಹೊರತಾಗಿ 080-68970007 ಸಂಖ್ಯೆಗೆ ಕರೆ ಮಾಡುವ ಮೂಲಕ ಇದ್ರ ಬಗ್ಗೆ ಮಾಹಿತಿ ಪಡೆಯಬಹುದು. ಇದ್ರಲ್ಲಿ ತರಬೇತಿ ಪಡೆದು, ಆನ್ಲೈನ್ ವ್ಯಾಪಾರ ಶುರು ಮಾಡಿ, ತಿಂಗಳಿಗೆ ಒಂದಷ್ಟು ಹಣ ಗಳಿಸಬಹುದು.