
ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ, ಅಂತ್ಯೋದಯ ಅನ್ನ ಯೋಜನೆ(ಎಎವೈ) ಕುಟುಂಬಗಳಿಗೆ ಸಾರ್ವಜನಿಕ ವಿತರಣಾ ಯೋಜನೆ(ಪಿಡಿಎಸ್) ಮೂಲಕ ವಿತರಿಸುವ ಸಕ್ಕರೆ ಸಬ್ಸಿಡಿ ಯೋಜನೆಯನ್ನು ಇನ್ನೂ ಎರಡು ವರ್ಷಗಳವರೆಗೆ ಮಾರ್ಚ್ 31, 2026 ರವರೆಗೆ ವಿಸ್ತರಿಸಲು ಗುರುವಾರ ಅನುಮೋದನೆ ನೀಡಿದೆ.
ಯೋಜನೆಯಡಿಯಲ್ಲಿ ರಾಜ್ಯಗಳಲ್ಲಿನ AAY ಕುಟುಂಬಗಳಿಗೆ ಕೇಂದ್ರ ಸರ್ಕಾರವು ಪ್ರತಿ ತಿಂಗಳು ಸಕ್ಕರೆಗೆ 18.50 ರೂ. ಸಹಾಯಧನ ನೀಡುತ್ತದೆ. ಅನುಮೋದನೆಯು 15 ನೇ ಹಣಕಾಸು ಆಯೋಗದ (2020-21 ರಿಂದ 2025-26) ಅವಧಿಯಲ್ಲಿ 1,850 ಕೋಟಿ ರೂ.ಗಿಂತ ಹೆಚ್ಚಿನ ಪ್ರಯೋಜನ ವಿಸ್ತರಿಸುವ ನಿರೀಕ್ಷೆಯಿದೆ. ಈ ಯೋಜನೆಯು ದೇಶದ ಸುಮಾರು 1.89 ಕೋಟಿ AAY ಕುಟುಂಬಗಳಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ.
ಈ ಯೋಜನೆಯಡಿ ಬಡವರಿಗೆ ಸಕ್ಕರೆ ಸಿಗಲಿದ್ದು, ಅವರ ಆಹಾರದಲ್ಲಿ ಶಕ್ತಿ ವೃದ್ಧಿಸುತ್ತದೆ. ಇದರಿಂದ ಅವರ ಆರೋಗ್ಯ ಸುಧಾರಿಸುತ್ತದೆ ಎಂದು ಹೇಳಲಾಗಿದೆ.
ಭಾರತ ಸರ್ಕಾರವು ಈಗಾಗಲೇ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ(PM-GKAY) ಅಡಿಯಲ್ಲಿ ಉಚಿತ ಪಡಿತರ ನೀಡುತ್ತಿದೆ. ‘ಭಾರತ್ ಅಟ್ಟ’, ‘ಭಾರತ್ ದಾಲ್’, ಟೊಮೆಟೊಗಳು ಮತ್ತು ಈರುಳ್ಳಿಗಳನ್ನು ಕೈಗೆಟುಕುವ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತಿದೆ.