ಕೇಂದ್ರ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರ ತುಟ್ಟಿಭತ್ಯೆಯಲ್ಲಿ ಶೇಕಡಾ ಮೂರರಷ್ಟು ಏರಿಕೆ ಮಾಡುವ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.
ಈ ಹೊಸ ಪ್ರಸ್ತಾವವು 2021ರ ಜುಲೈ 1ರಿಂದ ಅನ್ವಯವಾಗಲಿದೆ. ಈ ಮೂಲಕ ಈಗಿರುವ 28 ಪ್ರತಿಶತ ಮೂಲ ವೇತನ ಹಾಗೂ ಪಿಂಚಣಿಗೆ ಮೂರು ಪ್ರತಿಶತ ಸೇರ್ಪಡೆಯಾಗಿದೆ. ಹೀಗಾಗಿ ಇದು 31 ಪ್ರತಿಶತಕ್ಕೆ ಏರಿಕೆಯಾಗಲಿದೆ. ಕೇಂದ್ರ ಸರ್ಕಾರದ ಈ ನಿರ್ಧಾರದಿಂದ 47.14 ಲಕ್ಷ ಕೇಂದ್ರ ಸರ್ಕಾರಿ ನೌಕರರು ಹಾಗೂ 68.62 ಲಕ್ಷ ಪಿಂಚಣಿದಾರರಿಗೆ ಲಾಭವಾದಂತಾಗಿದೆ.
ಈ ಹೊಸ ಪ್ರಸ್ತಾವವದಿಂದಾಗಿ ಕೇಂದ್ರ ಸರ್ಕಾರದ ಖಜಾನೆಗೆ ಪ್ರತಿ ವರ್ಷ 9,488.70 ಕೋಟಿ ರೂ. ಹೊರೆ ಬೀಳಲಿದೆ.