alex Certify ಈ ಸಮಸ್ಯೆ ತಂದೊಡ್ಡಬಹುದು ಎಲೆಕೋಸಿನಲ್ಲಿರುವ ಹುಳ; ಮಾನಸಿಕ ಕಾಯಿಲೆಗೂ ಕಾರಣವಾಗುತ್ತೆ ನಮ್ಮ ಅಜಾಗರೂಕತೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಸಮಸ್ಯೆ ತಂದೊಡ್ಡಬಹುದು ಎಲೆಕೋಸಿನಲ್ಲಿರುವ ಹುಳ; ಮಾನಸಿಕ ಕಾಯಿಲೆಗೂ ಕಾರಣವಾಗುತ್ತೆ ನಮ್ಮ ಅಜಾಗರೂಕತೆ….!

ಎಲೆಕೋಸು ಅಥವಾ ಕ್ಯಾಬೇಜ್‌ ನಾವೆಲ್ಲರೂ ಬಳಸುವ ತರಕಾರಿಗಳಲ್ಲೊಂದು. ಆದರೆ ಕೆಲವೊಮ್ಮೆ ಅದರಲ್ಲಿ ಹುಳಗಳು ಬರುತ್ತವೆ. ಆ ಕೀಟಗಳ ಬಗ್ಗೆ ಜಾಗರೂಕರಾಗಿರಬೇಕು, ಏಕೆಂದರೆ ಅವು ನಮ್ಮ ಮೆದುಳಿಗೆ ಗಂಭೀರ ಹಾನಿ ಉಂಟುಮಾಡುತ್ತವೆ.

ಎಲೆಕೋಸು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಪಲ್ಯ, ಸಲಾಡ್‌, ಪಕೋಡ ಹೀಗೆ ಸಾಕಷ್ಟು ವೆರೈಟಿ ತಿನಿಸುಗಳನ್ನು ಕ್ಯಾಬೇಜ್‌ನಿಂದ ತಯಾರಿಸಲಾಗುತ್ತದೆ. ಆದರೆ ಇದು ಅನೇಕ ಅಡ್ಡ ಪರಿಣಾಮಗಳನ್ನು ಹೊಂದಿದೆ. ಎಲೆಕೋಸಿನಲ್ಲಿ ಕಂಡುಬರುವ ಸಣ್ಣ ಹುಳು ಮೆದುಳಿಗೆ ಹಾನಿ ಮಾಡುತ್ತದೆ ಎನ್ನುತ್ತಾರೆ ಆರೋಗ್ಯ ತಜ್ಞರು. ಅಪಸ್ಮಾರದಂತಹ ರೋಗಗಳ ಅಪಾಯವೂ ಇರುತ್ತದೆ.

ಪಂಜಾಬ್ ಮತ್ತು ಚಂಡೀಗಢದ ಹಲವು ಸ್ಥಳಗಳಲ್ಲಿ ಎಲೆಕೋಸು ಕತ್ತರಿಸಿ ಅದರ ಎಲೆಗಳ ಮೇಲಿದ್ದ ಸಿಸ್ಟಿಸರ್ಕಸ್‌ನ ಮೊಟ್ಟೆಗಳನ್ನು ಪ್ರಯೋಗಾಲಯದಲ್ಲಿ ಸಂಶೋಧಿಸಿದಾಗ ಈ ಕೀಟಗಳು ಕಂಡುಬಂದಿವೆ. ಇವು ದೇಹದ ಒಂದು ಭಾಗದ ಒಳಪ್ರವೇಶಿಸುತ್ತವೆ. ದೇಹದೊಳಗೆ ಪ್ರವೇಶಿಸುವ ಹುಳಗಳ ಮೊಟ್ಟೆಗಳು ಮೆದುಳಿಗೆ ಎಂಟ್ರಿಕೊಡುವ ಮೂಲಕ ಅಪಸ್ಮಾರದ ಸಮಸ್ಯೆಯನ್ನು ಹೆಚ್ಚಿಸಬಹುದು.

ಎಲೆಕೋಸಿನಲ್ಲಿ ಹುಳಗಳು ಬರುವುದ್ಹೇಗೆ ?

ಸಂಶೋಧನೆಯ ಪ್ರಕಾರ ಎಲೆಕೋಸಿನಲ್ಲಿ ಹುಳಗಳು ಸೇರಿಕೊಳ್ಳುವುದು ಚಿಟ್ಟೆಗಳ ಮೂಲಕ. ಏಷ್ಯಾ, ಉತ್ತರ ಆಫ್ರಿಕಾ ಮತ್ತು ದಕ್ಷಿಣ ಅಮೆರಿಕಾದಲ್ಲಿ ನಡೆಸಿದ ಅಧ್ಯಯನಗಳು ಬಿಳಿ ಚಿಟ್ಟೆಗಳು ಈ ಎಲೆಗಳ ಅಡಿಯಲ್ಲಿ ಮೊಟ್ಟೆಗಳನ್ನು ಇಡುತ್ತವೆ ಎಂದು ಕಂಡುಹಿಡಿದಿದೆ. ಇವುಗಳಿಂದ ಕೀಟಗಳ ಅಪಾಯವಿರಬಹುದು. ಎಲೆಕೋಸಿನಲ್ಲಿ ಹಲವಾರು ರೀತಿಯ ಕೀಟಗಳಿವೆ. ಪಿಯರಿಸ್ ರಾಪೇ, ಎಲೆಕೋಸು ಲೂಪರ್ ಮತ್ತು ಡೈಮಂಡ್‌ಬ್ಯಾಕ್ ಪತಂಗಗಳು. ಇವು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಅತ್ಯಂತ ಸಾಮಾನ್ಯವಾದ ಪತಂಗಗಳಾಗಿವೆ.

ಎಲೆಕೋಸು ಬೇಯಿಸಿದ ನಂತರವೂ ಕೀಟಗಳು ಜೀವಂತವಾಗಿರುತ್ತವೆಯೇ ?

ಎಲೆಕೋಸನ್ನು ಬೇಯಿಸಿದಾಕ್ಷಣ ಹುಳಗಳೆಲ್ಲ ಸತ್ತು ಹೋಗುತ್ತವೆ ಎಂದುಕೊಳ್ಳುವುದು ತಪ್ಪು. ಅವು ಸಾಯುವುದಿಲ್ಲ. ಹಾಗಾಗಿ ಬಳಸುವ ಮೊದಲು ಎಲೆಕೋಸನ್ನು ಉಪ್ಪು ಬೆರೆಸಿದ ಉಗುರು ಬೆಚ್ಚಗಿನ ನೀರಿನಲ್ಲಿ ಹಾಕಿ. ಸುಮಾರು 30 ನಿಮಿಷಗಳ ಕಾಲ ಬಿಡಿ. ನಂತರ ಆ ನೀರನ್ನು ಚೆಲ್ಲಿ ಕನಿಷ್ಠ ಎರಡು ಬಾರಿ ತೊಳೆದು ಅವುಗಳನ್ನು ಬಳಸಿ.

ಎಲೆಕೋಸು ತಿನ್ನಬಾರದೇ ?

ಎಲೆಕೋಸು ತಿನ್ನಲೇಬಾರದು ಎಂತಲ್ಲ. ಆದರೆ ಅದನ್ನು ಬಳಸುವ ಮೊದಲು ಅದನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಬೇಕು. ಎಲೆಕೋಸು ಹೊರತುಪಡಿಸಿ ನೆಲದಡಿಯಲ್ಲಿ ಬೆಳೆಯುವ ಯಾವುದೇ ತರಕಾರಿಗಳನ್ನು ತಿನ್ನುವ ಮೊದಲು ಸಂಪೂರ್ಣವಾಗಿ ಸ್ವಚ್ಛಗೊಳಿಸಬೇಕು. ಏಕೆಂದರೆ ಕೊಳಕು ನೀರಿನಲ್ಲಿ ವಾಸಿಸುವ ಅಥವಾ ಅದರ ಸಂಪರ್ಕಕ್ಕೆ ಬರುವ ಕಾರಣ ಹುಳಗಳು ಪ್ರವೇಶಿಸಬಹುದು. ಇದು ಅನೇಕ ಗಂಭೀರ ಕಾಯಿಲೆಗಳಿಗೆ ಕಾರಣವಾಗಬಹುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...