alex Certify ಬೆಂಗಳೂರಿನಲ್ಲಿ ನಿಮಗೆ ಸಕಾಲಕ್ಕೆ ಸಿಕ್ತಿಲ್ವಾ ಓಲಾ – ಉಬರ್ ಸೇವೆ…..? ಇದರ ಹಿಂದಿದೆ ಈ ಕಾರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಂಗಳೂರಿನಲ್ಲಿ ನಿಮಗೆ ಸಕಾಲಕ್ಕೆ ಸಿಕ್ತಿಲ್ವಾ ಓಲಾ – ಉಬರ್ ಸೇವೆ…..? ಇದರ ಹಿಂದಿದೆ ಈ ಕಾರಣ

ದೇಶ ಹಾಗೂ ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಐಟಿಯನ್ನು ಹೊರತುಪಡಿಸಿ ಉಳಿದ ಕ್ಷೇತ್ರಗಳ ಉದ್ಯೋಗಿಗಳು ಕಚೇರಿಗೆ ಹೋಗಲಾರಂಭಿಸಿದ್ದಾರೆ. ಆದರೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ತಮ್ಮ ಪ್ರಯಾಣಕ್ಕೆ ಬಹಳಷ್ಟು ಮಂದಿ ಓಲಾ ಹಾಗೂ ಉಬರ್ ಬುಕ್ ಮಾಡಲು ಹೋದ ವೇಳೆ ಈ ಮೊದಲಿನಂತೆ ಕೂಡಲೇ ಬುಕ್ ಮಾಡಲು ಸಾಧ್ಯವಾಗುತ್ತಿಲ್ಲ. ಇದರ ಹಿಂದಿನ ಕಾರಣ ಇಲ್ಲಿದೆ.

ಕೊರೊನಾ ಪೂರ್ವದಲ್ಲಿ ಬೆಂಗಳೂರಿನಲ್ಲಿ ಒಂದು ಲಕ್ಷಕ್ಕೂ ಅಧಿಕ ಕ್ಯಾಬ್ ಸೇವೆ ಲಭ್ಯವಿದ್ದು ಆದರೆ ಈಗ ಅದರ ಸಂಖ್ಯೆ ಕೇವಲ 30 ಸಾವಿರ ಎಂದು ಹೇಳಲಾಗಿದೆ. ಕೊರೊನಾದ ಮೊದಲನೇ ಅಲೆ ಎದುರಾದ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಲಾಕ್ಡೌನ್ ಘೋಷಿಸಿದ್ದು, ಹೀಗಾಗಿ ಬಹುತೇಕ ಕ್ಯಾಬ್ ಚಾಲಕರು ತಮ್ಮ ತಮ್ಮ ಊರುಗಳಿಗೆ ಮರಳಿದ್ದರು.

BIG NEWS: ಸಂಪುಟ ವಿಸ್ತರಣೆ, DCM ಹುದ್ದೆ ವಿಚಾರ; ಸಿಎಂ ಬೊಮ್ಮಾಯಿ ಸ್ಪಷ್ಟನೆ

ಆ ಬಳಿಕವೂ ಸಹ ಈ ಕ್ಯಾಬ್ ಚಾಲಕರುಗಳು ಬೆಂಗಳೂರಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ. ಹೆಚ್ಚುತ್ತಿರುವ ಇಂಧನ ದರದ ಹಿನ್ನೆಲೆಯಲ್ಲಿ ತಮಗೆ ಓಲಾ ಹಾಗೂ ಉಬರ್ ಸಂಸ್ಥೆಯಿಂದ ಹೆಚ್ಚಿನ ಲಾಭ ಸಿಗುತ್ತಿಲ್ಲ ಎಂಬ ಕಾರಣವೂ ಇದರ ಹಿಂದಿದೆ ಎನ್ನಲಾಗಿದೆ. ಹೀಗಾಗಿ ವಾಹನ ಸೇವಾ ಸಂಸ್ಥೆಗಳು ಚಾಲಕರಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ಶೇಕಡ 10 ಪ್ರಯಾಣ ದರವನ್ನು ಹೆಚ್ಚಿಸಿದರೂ ಸಹ ಚಾಲಕರಿಂದ ನಿರಾಸಕ್ತಿ ವ್ಯಕ್ತವಾಗಿದೆ.

ಈಗ ಓಲಾ ಹಾಗೂ ಉಬರ್ ಚಾಲನೆ ಮಾಡುತ್ತಿರುವ ಕೆಲವರು ಎಸಿಯನ್ನು ಆಫ್ ಮಾಡುವ ಮೂಲಕ ಇಂಧನ ಉಳಿತಾಯಕ್ಕೆ ಮುಂದಾಗಿದ್ದರೂ ಸಹ ಪ್ರಯಾಣಿಕರಿಂದ ವಿರೋಧ ವ್ಯಕ್ತವಾಗುತ್ತದೆ. ಒಟ್ಟಿನಲ್ಲಿ ಎರಡು ವರ್ಷಗಳ ಹಿಂದೆ ದೇಶದಲ್ಲಿ ವಕ್ಕರಿಸಿದ ಕೊರೊನಾ ಎಂಬ ಮಹಾಮಾರಿ ಕ್ಯಾಬ್ ಚಾಲಕರ ಬದುಕನ್ನು ಅತಂತ್ರವಾಗಿಸಿರುವುದಂತೂ ಸತ್ಯ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...