ತೃಣಮೂಲ ಕಾಂಗ್ರೆಸ್ ಸಿಎಎ ಜಾರಿಗೆ ತರುವುದಿಲ್ಲ ಎಂದು ವದಂತಿಗಳನ್ನು ಹರಡುತ್ತಿದೆ. ಆದರೆ, ಕೋವಿಡ್ ಅಲೆ ಕೊನೆಗೊಂಡ ನಂತರ ಸಿಎಎ ಜಾರಿಗೆ ತರಲಾಗುವುದು ಎಂದು ಕೇಂದ್ರ ಗೃಹ ಸಚಿವರ ಅಮಿತ್ ಶಾ,ಸ್ಪಷ್ಟಪಡಿಸಿದ್ದಾರೆ.
ಬಂಗಾಳದ ಸಿಲಿಗುರಿಯಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಟಿಎಂಸಿ ಸಿಎಎ ಬಗ್ಗೆ ವದಂತಿಗಳನ್ನು ಹರಡುತ್ತಿದೆ, ಅದನ್ನು ಜಾರಿಗೆ ತರಲಾಗುವುದಿಲ್ಲ ಎಂದೆಲ್ಲಾ ಹೇಳ್ತಿದೆ. ಆದರೆ, ಕೋವಿಡ್ ತರಂಗ ಕೊನೆಗೊಂಡ ಕ್ಷಣದಲ್ಲಿ ನಾವು ಸಿಎಎ ಜಾರಿಗೆ ತರುತ್ತೇವೆ ಎಂದು ನಾನು ಹೇಳಲು ಬಯಸುತ್ತೇನೆ ಎಂದರು.
ಮಮತಾ ದೀದಿಯವರು ಒಳನುಸುಳುವಿಕೆಯನ್ನು ಬಯಸುತ್ತಾರೆ. ಟಿಎಂಸಿ ದಬ್ಬಾಳಿಕೆಯ ಆಡಳಿತವನ್ನು ಬೇರುಸಹಿತ ಕಿತ್ತೊಗೆದು ಬಂಗಾಳದಲ್ಲಿ ಪ್ರಜಾಪ್ರಭುತ್ವವನ್ನು ಮರುಸ್ಥಾಪಿಸುವವರೆಗೂ ಬಿಜೆಪಿ ವಿಶ್ರಮಿಸುವುದಿಲ್ಲ ಎಂದು ಹೇಳಿದ್ದಾರೆ.
ಕೇಸರಿ ಪಕ್ಷವು ಸುಲಿಗೆ, ಭ್ರಷ್ಟಾಚಾರ ಮತ್ತು ರಾಜಕೀಯ ಹಿಂಸಾಚಾರದ ವಿರುದ್ಧ ಹೋರಾಡುವುದನ್ನು ಮುಂದುವರಿಸುತ್ತದೆ. ಬಂಗಾಳದ ಆಡಳಿತಾರೂಢ ಟಿಎಂಸಿಯು ಪೌರತ್ವ(ತಿದ್ದುಪಡಿ) ಕಾಯಿದೆಯ ಬಗ್ಗೆ ತಪ್ಪು ವದಂತಿ ಹರಡುತ್ತಿದೆ ಎಂದು ಆರೋಪಿಸಿದ ಅವರು, COVID-19 ಸಾಂಕ್ರಾಮಿಕ ರೋಗವು ಕೊನೆಗೊಂಡ ನಂತರ ಕಾನೂನನ್ನು ಜಾರಿಗೆ ತರಲಾಗುವುದು ಎಂದು ಹೇಳಿದರು.