ಶಿವಮೊಗ್ಗ: ವಿಪಕ್ಷ ನಾಯಕ ಹಾಗೂ ರಾಜ್ಯಾಧ್ಯಕ್ಷರ ಆಯ್ಕೆ ವಿಳಂಬ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಬಿಜೆಪಿ ಮಾಜಿ ಶಾಸಕ ಸಿ.ಟಿ.ರವಿ, ಕಾರಣವಿಲ್ಲದೇ ನಿರ್ಣಯ ಮುಂದೂಡಿಲ್ಲ ಎಂಬ ನಂಬಿಕೆಯಿದೆ ಎಂದಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ.ರವಿ, ಸೇನಾನಿ ಇಲ್ಲದೆಯೂ ಯುದ್ಧ ಗೆದ್ದ ಉದಾಹರಣೆಗಳಿವೆ. ಆದರೆ ಸೇನಾನಿ ಬೇಕೆ ಬೇಕು. ಪ್ರಯೋಗಗಳು ಇರಬೇಕು. ಇದು ಕೂಡ ಒಂದು ಪ್ರಯೋಗ ಎಂದು ಹೇಳಿದ್ದಾರೆ.
ಅಭಿವೃದ್ಧಿಗೆ ಮೂಲಸೌಕರ್ಯ, ಸ್ವಾವಲಂಬಿ ಮಾಡುವುದು ಅಗತ್ಯ. ಆದರೆ ಬೇಡುವ ಮಾನಸಿಕತೆ ದೀರ್ಘ ಕಾಲ ಇರುವುದು ಒಳ್ಳೆಯದಲ್ಲ. ನಾಲ್ವಡಿ ಕೃಷ್ಣರಾಜ ಒಡೆಯರ್ ಮಾದರಿಯಾಗಬೇಕು. ಆದರೆ ಕಾಂಗ್ರೆಸ್ ನವರಿಗೆ ಪ್ರೇರಣೆ ಆಗಿದ್ದು ಟಿಪ್ಪು. ಸರ್ಕಾರ ನೂರು ದಿನಗಳ ಒಳಗೆ ಪ್ರತಿಭಟನೆ ಎದುರಿಸುವಂತಾಗಿದೆ. ರೈತರದ್ದಾಯ್ತು, ಈಗ ಖಾಸಗಿ ವಾಹನ ಚಾಲಕರು ಮುಷ್ಕರಕ್ಕೆ ಮುಂದಾಗಿದ್ದಾರೆ ಎಂದರು.