ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ನೀರಿನ ದರ ಹೆಚ್ಚಳಕ್ಕೆ ರಾಜ್ಯ ಸರ್ಕಾರ ಸಿದ್ಧತೆ ನಡೆಸಿರುವ ವಿಚಾರವಾಗಿ ಕಿಡಿ ಕಾರಿರುವ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ, ಇನ್ನೇನು ಗಾಳಿ ದರವನ್ನು ಮಾತ್ರ ಬಿಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ.ರವಿ, ವಿದ್ಯುತ್, ಭೂಮಿ ಆಯ್ತು, ಪೆಟ್ರೋಲ್, ಡೀಸೆಲ್ ಆಯ್ತು. ಈಗ ನೀರಿನ ದರವನ್ನು ಹೆಚ್ಚಿಸಲು ಹೊರಟಿದ್ದಾರೆ. ಗಾಳಿ ದರವನ್ನು ಮಾತ್ರ ಬಿಟ್ಟಿದ್ದಾರೆ. ಅದನ್ನೂ ಹೆಚ್ಚಿಸಿ ಎಂದು ವಾಗ್ದಾಳಿ ನಡೆಸಿದರು.
ಭೂಮಿ ಮೇಲಿನ ಪಂಚಭೂತಗಳ ದರವನ್ನೂ ಹೆಚ್ಚಿಸಿ ಬಿಡಲಿ. ಅಲ್ಲಿಗೆ ಇನ್ನೇನೂ ಉಳಿಯುವುದಿಲ್ಲ ಎಂದು ಕಿಡಿಕಾರಿದ್ದಾರೆ.