ಚಿಕ್ಕಮಗಳೂರು: ನೆಲಮಂಗಲದಲ್ಲಿ ಗಣೇಶೋತ್ಸವ ಮೆರವಣಿಗೆ ವೇಳೆ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಿರುದ್ಧ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಕಿಡಿಕಾರಿದ್ದಾರೆ.
ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ.ರವಿ, ಯಾರ ಮೇಲೂ ತಲ್ವಾರ್ ಝಳಪಿಸಿಲ್ಲ, ಮಸೀದಿ ಮೇಲೆ ಕಲ್ಲು ತೂರಾಟ ನಡೆಸಿಲ್ಲ. ಆದರೆ ತಲ್ವಾರ್ ತೋರಿಸಿದ್ದು, ಪೆಟ್ರೋಲ್ ಬಾಂಬ್ ಹಾಕಿದ್ದು ಮತಾಂಧರು. ಅವರನ್ನು ಬಿಟ್ಟು ಗಣಪತಿ ಮೂರ್ತಿ ಕೂರಿಸಿದವರ ಮೆಲೆ ಸರ್ಕಾರದವರು ಕೇಸ್ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.
ಓಲೈಕೆ ರಾಜನೀತಿ ಪರಿಣಾಮ ಮತಾಂಧತೆಗೆ ಕೊನೆ ಇಲ್ಲದಂತಾಗಿದೆ. ತಲ್ವಾರ್ ಝಳಪಿಸಿದವರನ್ನು, ಪೆಟ್ರೋಲ್ ಬಾಂಬ್ ಹಾಕಿದವರನ್ನು ಬಿಟ್ಟು, ಗಣೇಶ ಮೂರ್ತಿ ಕೂರಿಸಿದವರನ್ನು ಎ1 ಎಂದು ಬಂಧಿಸಲಾಗಿದೆ. ಸರ್ಕಾರದ ಈ ಧೋರಣೆ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.