
ಬೆಂಗಳೂರು: ಬೆಲೆ ಏರಿಕೆ ಮಾಡುತ್ತೇವೆ ಎಂದು ಕಾಂಗ್ರೆಸ್ ಮೊದಲೇ ಹೇಳಿದ್ದರೆ ಚುನಾವಣೆಯಲ್ಲಿ 50 ಸೀಟ್ ಗಳನ್ನೂ ಗೆಲ್ಲುತ್ತಿರಲಿಲ್ಲ ಎಂದು ಪರಿಷತ್ ಸದಸ್ಯ ಸಿ.ಟಿ.ರವಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ.ರವಿ, ಆಳ್ವಿಕೆ ಮಾಡಿದ 22 ತಿಂಗಳಲ್ಲಿ ಬರಿ 18 ತಿಂಗಳು ಬೆಲೆ ಏರಿಕೆಯದ್ದೇ ಸುದ್ದಿ. ಹಾಲಿನಿಂದ ಹಿಡಿದು ಆಲ್ಕೋಹಾಲ್ ವರೆಗೂ ಎಲ್ಲದರ ದರ ಏರಿಕೆ ಮಾಡಿದೆ. ಗ್ಯಾರಂಟಿ ಕೊಡ್ತೀವಿ ಎಂದು ಜನರಿಗೆ ಬೆಲೆ ಏರಿಕೆ ಬೆರೆ ಎಳೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಬ್ರ್ಯಾಂಡ್ ಬೆಂಗಳೂರು ಅಂತಾರೆ ಆದರೆ ಬೆಂಗಳೂರಿನಲ್ಲಿ ಎಲ್ಲಿ ನೋಡಿದರಲ್ಲಿ ಕಸದ ರಾಶಿ. ಈಗ ಕಸ ಸಂಗ್ರಹಣೆಗೂ ಸೆಸ್ ವಿಧಿಸುತ್ತಿದ್ದಾರೆ. ಹಿಮಾಲಯದಲ್ಲಿ ಶೌಚಾಲಯಕ್ಕೂ ಟ್ಯಾಕ್ ಹಾಕಿದ್ದರು. ಹಾಗೇ ರಾಜ್ಯದಲ್ಲಿ ಉಸಿರಾಡುವ ಗಾಳಿಗೂ ಟ್ಯಾಕ್ಸ್ ಹಾಕಬಹುದು ಎಂದು ಜನ ಬೈಯ್ಯುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.