![](https://kannadadunia.com/wp-content/uploads/2022/06/ct-ravi-800x445-1.jpg)
ನವದೆಹಲಿ: ರಾಜ್ಯ ಬಿಜೆಪಿಯಲ್ಲಿನ ಬಣ ಬಡಿದಾಟ, ರಾಜ್ಯಾಧ್ಯಕ್ಷರ ಬದಲಾವಣೆ ಕೂಗು ವಿಚಾರವಾಗಿ ಬಿಜೆಪಿ ಎಂ ಎಲ್ ಸಿ ಸಿ.ಟಿ.ರವಿ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ.ರವಿ, ನಾನು ನನಗೆ ಲಕ್ಷ್ಮಣ ರೇಖೆ ಹಾಕಿಕೊಂಡಿದ್ದೇನೆ. ನಮ್ಮ ಪಕ್ಷದ ಆಂತರಿಕ ವಿಚಾರಗಳ ಬಗ್ಗೆ ಬಹಿರಂಗವಾಗಿ ಚರ್ಚೆ ಮಾಡಲ್ಲ ಎಂದು ಹೇಳಿದರು.
ಇನ್ನು ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರವಾಗಿ, ಸಿದ್ದರಾಮಯ್ಯ ಹತ್ತು ವರ್ಷವೋ, 20 ವರ್ಷವೋ ಅವರೇ ಇರಲಿ. ಅವರ ಪಕ್ಷದಲ್ಲೇ ಸ್ಪರ್ಧೆ ಇದೆ. ನಾವ್ಯಾರೂ ಅವರು ಇರೋದು ಬೇಡ ಅಂದಿಲ್ಲ ಎಂದರು.
ಸಿಎಂ ಸಿದ್ದರಾಮಯ್ಯ, ಮಾಜಿ ಸಿಎಂ ದೇವರಾಜ್ ಅರಸು ದಾಖಲೆ ಮುರಿಯುತ್ತಾರೆ ಎಂಬ ಸಚಿವ ಎಂ.ಬಿ.ಪಾಟೀಲ್ ಹೇಳಿಕೆಗೆ, ಸಿದ್ದರಾಮಯ್ಯ ಅರಸು ದಾಖಲೆ ಮುರಿತಾರೋ ಇಲ್ವೋ ಆದರೆ ಭ್ರಷ್ಟಾಚಾರ, ಬೆಲೆ ಏರಿಕೆಯಲ್ಲಿ ದಾಖಲೆ ಮಾಡಿದ್ದಾರೆ. ಬೆಂಗಳೂರಿನಲ್ಲಿ ಬಹುಮಹಡಿ ಕಟ್ಟದ ನಿರ್ಮಾಣಕ್ಕೆ ಅನುಮತಿ ನೀದಲು ಅಡಿಗೆ 100 ರೂ ಕೊಡಬೇಕು. ಬಿಲ್ಡರ್ಸ್ ರೋಸಿ ಹೋಗಿದ್ದಾರೆ. ಅತಿ ಹೆಚ್ಚು ಸರ್ಕಾರಿ ನೌಕರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 100% ಲೂಟಿ ಮಾಡುತ್ತಿದ್ದಾರೆ. ಇದು ಇವರ ದಾಖಲೆ ಎಂದು ಕಿಡಿಕಾರಿದರು.