ಚಿಕ್ಕಮಗಳೂರು: ಕಾಂಗ್ರೆಸ್ ಸರ್ಕರ ಜನವಿರೋಧಿ ಸರ್ಕಾರ. ಇದು ಸತು ಹೋಗಿರುವ ಸರ್ಕಾರ. ಜನರೇ ದಫನ್ ಮಾಡುವ ದಿನ ಬರುತ್ತದೆ ಎಂದು ಬಿಜೆಪಿ ಎಂಎಲ್ ಸಿ ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ.ರವಿ, ತೈಲ ಬೆಲೆ ಏರಿಕೆಯಾದರೆ ಬೆಲೆ ಏರಿಕೆ ಲೈಸನ್ಸ್ ಕೊಟ್ಟಂತೆ. . ಕಷ್ಟದಲ್ಲಿರುವ ಜನರಿಗೆ ಸರ್ಕಾರ ದರ ಏರಿಕೆ ಬರೆ ಹಾಕಿದೆ. ಇದು ಜನ ವಿರೋಧಿ ಸರ್ಕಾರ ಎಂದು ಹೇಳಲು ಮತ್ಯಾವ ಸರ್ಟಿಫಿಕೇಟ್ ಬೇಕಿಲ್ಲ ಎಂದು ಕಿಡಿಕಾರಿದರು.
ಈ ಹಿಂದೆ ಪ್ರಧಾನಿ ಮೋದಿ ಪೆಟ್ರೋಲ್ ದರ ಏರಿಸಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಬೈಕ್ ಹೊತ್ತೊಯ್ಯುವ ಅಣುಕು ಪ್ರದರ್ಶನ ಮಾಡಿದ್ರು. ಈಗ ಯಾರನ್ನು ಹೊತ್ಕೊಂಡು ಹೋಗಬೇಕು? ನಿಮ್ಮ ಸರ್ಕಾರವನ್ನೇ ಹೊತ್ತುಕೊಂಡು ಹೋಗಬೇಕು ಎಂದು ವಾಗ್ದಾಳಿ ನಡೆಸಿದರು.
ಚುನಾವಣೆ ಸೋಲಿನ ಬಳಿಕ ಸರ್ಕಾರ ಜನರ ಮೇಲೆ ಸೇಡು ತೀರಿಸಿಕೊಳ್ಳುತ್ತಿದೆ. ರಾಜಕೀಯ ಪಕ್ಷ, ನಾಯಕ ಮೇಲೆ ಸೇಡು ಆಯ್ತು ಈಗ ಜನಸಾಮಾನ್ಯರ ಮೇಲೆ . ತಕ್ಷಣ ತೈಲ ಬೆಲೆ ಏರಿಕೆ ಆಡೇಶ ಹಿಂಪಡೆಯಬೇಕು ಎಂದು ಆಗ್ರಹಿಸಿದರು.