ಬೆಂಗಳೂರು: ಕಾಂಗ್ರೆಸ್ ಪಕ್ಷಕ್ಕೆ ಹೊರಗಿನಿಂದ ಬಂದವರ ಬಗ್ಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ವಿಧಾನಪರಿಷತ್ ಸದಸ್ಯ ಸಿ.ಎಂ. ಇಬ್ರಾಹಿಂ ಟಾಂಗ್ ಕೊಟ್ಟಿದ್ದಾರೆ.
ಮನೆಗೆ ಸೊಸೆ ಹೊಸದಾಗಿಯೇ ಬರುತ್ತಾರೆ. ಹಾಗೆಂದು ಸೊಸೆಗೆ ನೀನು ವಲಸೆ ಬಂದವರು ಎಂದು ಹೇಳಲಾಗುತ್ತದೆಯೆ? ಸ್ವಲ್ಪ ದಿನದ ನಂತರ ಸೊಸೆಯ ಕೈಗೆ ಮನೆಯ ಕೀಲಿಕೈ ಹೋಗುತ್ತದೆ. ಈಗ ಸಿದ್ದರಾಮಯ್ಯನವರ ಬಳಿ ಕೀಲಿಕೈ ಇದೆ. ವಲಸಿಗರು, ಹೊಸಬರು ಎಂಬ ಜಟಾಪಟಿ ನಡೆಯಲ್ಲ ಎಂದು ಸಿಎಂ ಇಬ್ರಾಹಿಂ ತಿಳಿಸಿದ್ದಾರೆ.
ಸಿದ್ದರಾಮಯ್ಯನವರಿಗೆ ಮೇಕಪ್ ಮಾಡಿದವರೆ ನಾವು. ಮುಂದಿನ ಮುಖ್ಯಮಂತ್ರಿ ಎಂದು ಹೇಳಿದವರು ಯಾರು? ಹಿನ್ನೆಲೆ ಗಾಯಕರು ಯಾರು? ಹಿನ್ನಲೆ ಗಾಯಕರು ಕಾಣುವುದಿಲ್ಲ. ಎಂಬುದನ್ನು ಗಮನಿಸಲಿ. ಹಿಂದಿನ ಕ್ಯಾಸೆಟ್ ತೆಗೆದು ನೋಡಿ ಎಂದು ಹೇಳಿದ್ದಾರೆ.
ಚುನಾವಣೆಯಲ್ಲಿ ಶಾಸಕರು ಗೆದ್ದು ನಂತರ ತೀರ್ಮಾನ ಕೈಗೊಳ್ಳಲಾಗುತ್ತದೆ. ರಾಷ್ಟ್ರೀಯ ಪಕ್ಷದಲ್ಲಿ ಹೈಕಮಾಂಡ್ ತೀರ್ಮಾನ ಕೈಗೊಳ್ಳುತ್ತದೆ. ಹೈಕಮಾಂಡ್ ಯಾವ ತೀರ್ಮಾನ ಕೈಗೊಳ್ಳುತ್ತದೆ ಎಂಬುದನ್ನು ನೋಡೋಣ ಎಂದು ಹೇಳಿದ್ದಾರೆ.