ಬೆಂಗಳೂರು: ಆನ್ ಲೈನ್ ವಂಚನೆ ಪ್ರಕರನ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಬೈಜೂಸ್ ಟ್ಯೂಷನ್ ಸೆಂಟರ್ ಹೆಸರಲ್ಲಿ ವಂಚಕರು ಪೋಷಕರಿಂದ ಲಕ್ಷ ಲಕ್ಷ ಹಣ ದೋಚಿರುವ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.
ರಾಮ್ ಕೈಲಾಶ್ ಯಾದವ್ ಎಂಬುವವರು ತಮ್ಮ ಮಗನನ್ನು ಬೈಜೂಸ್ ಟ್ಯೂಷನ್ ಸೆಂತರ್ ಗೆ ಸೇರಿಸಿದ್ದರು. ಸರಿಯಾಗಿ ಪಾಠ ಹೇಳಿಕೊಡುತ್ತಿಲ್ಲ ಎಂದು ರಾಮ್ ಕೈಲಾಶ್, ಟ್ಯೂಷನ್ ಸೆಂಟರ್ ನಿಂದ ಹಣ ವಾಪಾಸ್ ಕೇಳಿದ್ದರು. ಇದೇ ವೇಳೆ ಟ್ಯೂಷನ್ ಸೆಂಟರ್ ನಡೆಸುತ್ತಿದ್ದ ಕಟ್ಟಡದ ಬಾಡಿಗೆ ಕಟ್ಟಿಲ್ಲ ಎಂಬ ಕಾರಣಕ್ಕೆ ಬೈಜೂಸ್ ಟ್ಯೂಷನ್ ಸೆಂಟರ್ ಬಂದ್ ಮಾಡಲಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡ ವಂಚಕರು ರಾಮ್ ಕೈಲಾಶ್ ಗೆ ಕರೆ ಮಾಡಿ ನೀವು ಹಣ ಮರಳಿಸುವಂತೆ ಹೇಳಿದ್ದೀರಾ, ಆದರೆ ನಿಮ್ಮ ಖಾತೆಗೆ ಹಣ ವರ್ಗಾವಣೆಯಾಗುತ್ತಿಲ್ಲ. ಹಾಗಾಗಿ ನಾನು ಒಂದು ಲಿಂಕ್ ಕಳುಹಿಸುತ್ತೇನೆ ಆ ಲಿಂಕ್ ಕ್ಲಿಕ್ ಮಾಡುವಂತೆ ಹೇಳಿದ್ದಾರೆ.
rustdesk.apk ಎಂಬ ಲಿಂಕ್ ಬಂದಿದ್ದು, ಆಲಿಂಕ್ ಕ್ಲಿಕ್ ಮಾಡುತ್ತಿದ್ದಂತೆ ಆಪ್ ಇನ್ಸ್ಟಾಲ್ ಆಗಿದೆ. ತಕ್ಷಣ ವಂಚಕರು ರಾಮ್ ಕೈಲಾಶ್ ಅಕೌಂಟ್ ನಿಂದ 1.30 ಲಕ್ಷ ಹಣ ಎಗರಿಸಿದ್ದಾರೆ. ಹಣ ಡ್ರಾ ಆಗುತ್ತಿದ್ದಂತೆ ರಾಮ್ ಕೈಲಾಶ್ ಬ್ಯಾಂಕ್ ಗೆ ಮಾಹಿತಿ ನೀಡಿದ್ದಾರೆ. ಅಲ್ಲದೇ ಸೈಬರ್ ಕ್ರೈಂ ಠಾಣೆಗೂ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಂಚಕರ ಪತ್ತೆಗೆ ಬಲೆ ಬೀಸಿದ್ದಾರೆ.