ಚೀನಾದ ಎಲೆಕ್ಟ್ರಿಕ್ ವಾಹನಗಳ ಉತ್ಪಾದಕ ಬಿವೈಡಿ ಭಾರತದಲ್ಲಿ ಕಳೆದ ಎಂಟು ವರ್ಷಗಳಿಂದಲೂ ಇದೆ. ದೇಶದಲ್ಲಿ ಎಲೆಕ್ಟ್ರಿಕ್ ಬಸ್ಸುಗಳನ್ನು ಮಾರಾಟ ಮಾಡುತ್ತಿರುವ ಬಿವೈಡಿ 2019ರಲ್ಲಿ ಟಿ3 ಎಲೆಕ್ಟ್ರಿಕ್ ಎಂಪಿವಿ ಮತ್ತು ಟಿ3 ಎಲೆಕ್ಟ್ರಿಕ್ ವ್ಯಾನ್ ಬಿಡುಗಡೆ ಮಾಡಿದೆ.
ಈ ವರ್ಷದ ನವೆಂಬರ್ನಲ್ಲಿ ತನ್ನ ಮೊದಲ ಪ್ರಯಾಣಿಕ ವಾಹನ ಇ6 ಬಿಡುಗಡೆ ಮಾಡಿದ ಬಿವೈಡಿ, ಇದರ ಬೆಲೆಯನ್ನು 29.6 ಲಕ್ಷ ರೂ.ಗಳ ಬದಲಿಗೆ 29.15 ಲಕ್ಷ ರೂ.ಗಳಿಗೆ ಬಿ2ಬಿ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ಈ ಬೆಲೆಗಳು ಎಕ್ಸ್ಶೋರೂಂ ಮಟ್ಟದವು.
ಮೂರು ವರ್ಷ ಅಥವಾ 1.25 ಲಕ್ಷ ಕಿಮೀ ವಾರಂಟಿಯೊಂದಿಗೆ ಬರುವ ಬಿವೈಡಿ ಇ6, ಬ್ಯಾಟರಿ ಸೆಲ್ ಮೇಲೆ ಎಂಟು ವರ್ಷಗಳ ಅಥವಾ 5 ಲಕ್ಷ ಕಿಮೀಗಳ ವಾರಂಟಿ ಕೊಟ್ಟಿದ್ದು, ಟ್ರಾಕ್ಷನ್ ಮೋಟರ್ ವಾರಂಟಿಯನ್ನು 8 ವರ್ಷ ಅಥವಾ 1.5 ಲಕ್ಷ ಕಿಮೀಗಳವರೆಗೂ ನೀಡಿದೆ.
BIG NEWS: ಮಹಿಳೆಯರೊಂದಿಗೆ ಅಸಭ್ಯ ವರ್ತನೆ ಕೇಸ್; CPI ಸಸ್ಪೆಂಡ್
ಬಿವೈಡಿ ಇ6 ಆರಂಭದ ದಿನಗಳಲ್ಲಿ ಬೆಂಗಳೂರು, ದೆಹಲಿ-ಎನ್ಸಿಆರ್, ಹೈದರಾಬಾದ್, ಮುಂಬೈ, ಚೆನ್ನೈ, ವಿಜಯವಾಡಾ, ಕೊಚ್ಚಿ ಮತ್ತು ಅಹಮದಾಬಾದ್ಗಳಲ್ಲಿ ಲಭ್ಯವಿರಲಿದೆ. ಈ ಜಾಗಗಳನ್ನು ತನ್ನ ಡೀಲರ್ ಜಾಲ ಬೆಳೆಸಲು ಮುಂದಾಗಿರುವ ಕಂಪನಿ, ಆರು ಡೀಲರ್ಗಳನ್ನು ಅದಾಗಲೇ ಗುರುತಿಸಿದೆ.
ಒಮ್ಮೆ ಚಾರ್ಜ್ ಮಾಡಿದರೆ 415ಕಿಮೀ ಚಲಿಸಬಲ್ಲ ಬಿವೈಡಿ ಇ6, 130ಕಿಮೀ/ಗಂಟೆಯಷ್ಟು ಗರಿಷ್ಠ ವೇಗಮಿತಿ ಹೊಂದಿದೆ. ಡಿಸಿ ಚಾರ್ಜಿಂಗ್ ಮೂಲಕ ಬ್ಯಾಟರಿ ಶಕ್ತಿಯನ್ನು 30% ನಿಂದ 80%ಗೆ ಏರಿಸಲು 35 ನಿಮಿಷಗಳು ಸಾಕು ಎಂದು ಕಂಪನಿ ಹೇಳಿಕೊಂಡಿದೆ.
ಸಿಎನ್95 ವಾಯುಶುದ್ಧಕ ವ್ಯವಸ್ಥೆ, ಡ್ಯುಯಲ್-ಫ್ರಂಟ್ ಏರ್ಬ್ಯಾಗ್ಗಳು, ವೈಫೈ ಕನೆಕ್ಟಿವಿಟಿ, ಬ್ಲೂಟೂತ್, ಸೆಮಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, 10.1 ಇಂಚು ತಿರುಗಬಲ್ಲ ಟಚ್ಸ್ಕ್ರೀನ್ನಂಥ ಆಕರ್ಷಕ ಫೀಚರ್ಗಳನ್ನು ಬಿವೈಡಿ ಇ6 ಹೊಂದಿದೆ.