ಬಿಲ್ಡ್ ಯುವರ್ ಡ್ರೀಮ್ಡ್ ಎಂಬ ಚೀನಾ ಕಂಪನಿ ಭಾರತದಲ್ಲಿ ತನ್ನ ಎಲೆಕ್ಟ್ರಿಕ್ ಕಾರು ಉತ್ಪನ್ನವಾದ ಅಟ್ಟೊ 3 ಎಲೆಕ್ಟ್ರಿಕ್ ಎಸ್ ಯು ವಿ ಬಿಡುಗಡೆ ಮಾಡಿದೆ. ದೆಹಲಿ ಎಕ್ಸ್ ಶೋರೂಂ ದರದ ಪ್ರಕಾರ ಈ ಕಾರಿನ ಬೆಲೆ 33.99 ಲಕ್ಷ ಇದೆ. ವಿಶೇಷ ವಿನ್ಯಾಸ ಮಾಡುವ ಮೂಲಕ ಮುಂಚೂಣಿಯಲ್ಲಿ ಇರುವ ಈ ಕಂಪನಿಗೆ ಬೇಡಿಕೆ ಹೆಚ್ಚಾಗುತ್ತಿದೆಯಂತೆ. ಈ ಕಾರು ಬಿಡುಗಡೆ ನಂತರ ಇನ್ನಷ್ಟು ಬೇಡಿಕೆ ಹೆಚ್ಚಾಗಲಿದೆ ಎನ್ನಲಾಗಿದೆ.
ವಿಶೇಷ ಫೀಚರ್ ಗಳನ್ನು ನೀಡುವ ಮೂಲಕ ಗ್ರಾಹಕರನ್ನು ಸೆಳೆಯುತ್ತಿದೆ ಈ ಹೊಸ ಕಾರು. ಹೊಸ ಅಟ್ಟೊ 3 ಎಲೆಕ್ಟ್ರಿಕ್ ಎಸ್ ಯು ವಿಯಲ್ಲಿ 60.48kWh ಬ್ಲೇಡ್ ಬ್ಯಾಟರಿ ಕೊಡಲಾಗಿದೆ. ಇದು ಪ್ರತಿ ಚಾರ್ಜ್‌ಗೆ ಗರಿಷ್ಠ 521 ಕಿ.ಮೀ ಮೈಲೇಜ್ ನೀಡುತ್ತದೆಯಂತೆ. ಇದು 201 ಹಾರ್ಸ್ ಪವರ್, 310 ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ. ಈ ಕಾರಿನ ಬ್ಯಾಟರಿ 50 ನಿಮಿಷಗಳಲ್ಲಿ 80kW ಫಾಸ್ಟ್ ಚಾರ್ಜಿಂಗ್ ಆಗಲಿದೆಯಂತೆ. ಎಸಿ ಚಾರ್ಜರ್ ನಲ್ಲಿ ಪೂರ್ತಿ ಚಾರ್ಜ್ ಆಗಲು ಗರಿಷ್ಠ 10 ಗಂಟೆಗಳ ಕಾಲ ಸಮಯ ತೆಗೆದುಕೊಳ್ಳುತ್ತದೆ. ಇದರಲ್ಲಿ 6 ಏರ್ ಬ್ಯಾಗ್ ಗಳು, 360 ಡಿಗ್ರಿ ಕ್ಯಾಮೆರಾ, ಇಎಸ್ಪಿ, ಟ್ರಾಕ್ಷನ್ ಕಂಟ್ರೋಲ್, ಹಿಲ್ ಡಿಸೆಂಟ್ ಕಂಟ್ರೋಲ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಬ್ಲೈಂಡ್ ಸ್ಪಾಟ್ ಡಿಟೆಕ್ಷನ್, ಲೇನ್ ಡಿಪಾರ್ಚರ್ ವಾರ್ನಿಂಗ್ ಮತ್ತು ಲೇನ್ ಕೀಪಿಂಗ್ ಅಸಿಸ್ಟ್ ಸೇರಿದಂತೆ ಹಲವಾರು ಸುರಕ್ಷಾ ಸೌಲಭ್ಯಗಳನ್ನು ನೀಡಲಾಗಿದೆ.
ನೋಡೋದಿಕ್ಕೂ ಈ ಕಾರು ವಿಶೇಷವಾಗಿ ಕಾಣಲಿದೆ. ಗ್ರೇ ಬ್ಲ್ಯೂ ಜೊತೆ ರೆಡ್ ಹೈಲೈಟ್ಸ್ ಈ ಕಾರಿಗೆ ನೀಡಲಾಗಿದ್ದು, ಡಬ್ಬಲ್ ಶೇಫ್ ಹೊಂದಿರುವ ಎಸಿ ವೆಂಟ್ಸ್, ಗ್ರಿಲ್ ಸ್ಟೈಲ್ ಹೊಂದಿರುವ ಡೋರ್ ಹ್ಯಾಂಡಲ್ಗಳು, ಡ್ರೈವಿಂಗ್ ಗೆ ಬೇಕಾದ ರೀತಿ ಬಳಸಬಹುದು. 12.8 ಇಂಚಿನ ಇನ್ಪೋಟೈನ್ ಮೆಂಟ್ ಸಿಸ್ಟಂ, ಡಿಜಿಟಲ್ ಡ್ರೈವರ್ ಡಿಸ್ ಪ್ಲೇ, ಒನ್ ಟಚ್ ಎಲೆಕ್ಟ್ರಿಕ್ ಕಂಟ್ರೋಲ್ ಟೈಲ್ ಗೇಟ್, 8 ಸ್ಪೀಕರ್ಸ್ ಆಡಿಯೋ ಸಿಸ್ಟಂ, ವಾಯ್ಸ್ ಕಂಟ್ರೋಲ್, ಆಂಬಿಯೆಂಟ್ ಲೈಟಿಂಗ್ಸ್, ಪಿಎಂ 2.5 ಏರ್ ಫಿಲ್ಟರ್ ಸೇರಿದಂತೆ ಪನೋರಮಿಕ್ ಸನ್ ರೂಫ್ ಮತ್ತು ವೈರ್ ಲೈಸ್ ಸ್ಮಾರ್ಟ್ ಫೋನ್ ಚಾರ್ಜಿಂಗ್ ಹೀಗೆ ಹಲವಾರು ಸೌಲಭ್ಯಗಳನ್ನು ನೀಡಲಾಗಿದೆ. ಇದು 4,455 ಎಂಎಂ ಉದ್ದ, 1,875 ಎಂಎಂ ಅಗಲ, 1,615 ಎತ್ತರ, 2,720 ಎಂಎಂ ವ್ಹೀಲ್ ಬೆಸ್, 175 ಎಂಎಂ ಗ್ರೌಂಡ್ ಕ್ಲಿಯೆರೆನ್ಸ್ ಹೊಂದಿದೆ. ಇದರೊಂದಿಗೆ ಹೊಸ ಕಾರಿನಲ್ಲಿ 440 ಲೀಟರ್ ಸಾಮರ್ಥ್ಯದ ಬೂಟ್ ಸ್ಪೆಸ್ ಹೊಂದಿದ್ದು, ಇದು ಒಟ್ಟು 1,750 ಕೆ.ಜಿ ತೂಕ ಪಡೆದುಕೊಂಡಿದೆ. ಹೀಗೆ ಹತ್ತು ಹಲವು ವಿಶೇಷತೆಗಳನ್ನು ಈ ಕಾರು ಹೊಂದಿದೆ.