ಹಾವೇರಿ: ಬ್ಯಾಡಗಿ ಮೆಣಸಿನಕಾಯಿ ದರ ಏಕಏಕಿ ಕುಸಿತವಾಗಿದ್ದು, ರೈತರು ಕಂಗಾಲಾಗಿದ್ದಾರೆ. ಕಳೆದ ವಾರ ಒಂದು ಕ್ವಿಂಟಾಲ್ ಗೆ 20 ಸಾವಿರ ರೂಪಾಯಿ ಇದ್ದ ದರ ಈಗ ಕ್ವಿಂಟಾಲ್ ಗೆ 12 ಸಾವಿರ ರೂಪಾಯಿ ಇಳಿದಿದೆ. ಇದರಿಂದ ಆಕ್ರೋಶಗೊಂಡ ರೈತರು ಮೆಣಸಿನಕಾಯಿ ತುಂಬಿದ್ದ ವಾಹನ ಸೇರಿ 12ಕ್ಕೂ ಹೆಚ್ಚು ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ.
ಏಕಏಕಿ ಬ್ಯಾಡಗಿ ಮೆಣಸಿನಕಾಯಿ ದರ ಕುಸಿಯಲು ಕರಣವೇನು? ಎಂಬುದನ್ನು ತಿಳಿದು ಸರ್ಕಾರಕ್ಕೆಶೀಘ್ರವೇ ವರದಿ ಸಲ್ಲಿಸುವಂತೆ ಅಧಿಕರಿಗಳಿಗೆ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ವರದಿ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು. ರೈತರು ತಾಳ್ಮೆ ಕಳೆದುಕೊಂಡು ಎಪಿಎಂಸಿಗೆ ನುಗ್ಗಿ ಪೀಠೋಪಕರಣ ಧ್ವಂಸ ಮಡಿದ್ದಾರೆ. ಅಲ್ಲದೇ ಮೂರು ಪೊಲೀಸ್ ವಾಹನ ಸೇರಿ ಹಲವು ವಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಒಂದೇ ದಿನದಲ್ಲಿ ಮೆಣಸಿನಕಾಯಿ ದರ 8 ಸಾವಿರ ರೂಪಾಯಿ ಕುಸಿದಿದೆ ಇದು ಹಾವೇರಿ ಎಪಿಎಂಸಿಯಲ್ಲಿ ಸಂಚಲನ ಸೃಷ್ಟಿಸಿದೆ. ಯಾವೆಲ್ಲ ಮಾರುಕಟ್ಟೆಗಳಲ್ಲಿ ಮೆಣಸಿನಕಾಯಿ ದರ ಕುಸಿತವಾಗಿದೆ ಎಂಬುದನ್ನು ಪರಿಶೀಲಿಸಿ ವರದಿ ನೀಡುವಂತೆ ಸೂಚಿಸಲಾಗಿದೆ ಎಂದು ಹೇಳಿದರು.