
ಹಾವೇರಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರೊಂದಿಗೆ ರಾಜಿಯಾಗುವ ಪ್ರಶ್ನೆಯೇ ಇಲ್ಲ ಎಂದು ಪಕ್ಷದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರೊಂದಿಗೆ ರಾಜಿಯಾಗಬೇಕು? ಅಪ್ಪ,ಮಕ್ಕಳ ಜೊತೆಗೆ ರಾಜಿ ಅವಶ್ಯಕತೆ ಇಲ್ಲ. ವಿಜಯೇಂದ್ರ ಅವರಿಂದ ನನಗೇನು ಆಗಬೇಕಿಲ್ಲ. ಅವರೊಂದಿಗೆ ನನ್ನ ಯಾವ ವ್ಯವಹಾರವೂ ಇಲ್ಲ ಎಂದು ಹೇಳಿದ್ದಾರೆ.
ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಬೇಕು ಅಷ್ಟೇ. ವಿಜಯೇಂದ್ರ ನೇತೃತ್ವದಲ್ಲಿ ಇಲ್ಲಿ ಚುನಾವಣೆಗೆ ಹೋಗುತ್ತಿಲ್ಲ. ಪ್ರಧಾನಿ ಮೋದಿ ನೇತೃತ್ವದಲ್ಲಿ ಶ್ರೀರಾಮಚಂದ್ರನ ಆಶೀರ್ವಾದದೊಂದಿಗೆ ಲೋಕಸಭೆ ಚುನಾವಣೆ ಎದುರಿಸುತ್ತೇವೆ ಎಂದು ತಿಳಿಸಿದ್ದಾರೆ,
ವಿಜಯೇಂದ್ರ ಅವರ ಉದ್ದೇಶ ಏನು? ಸೋಮಣ್ಣ ಮೇಲೆ ಏನು ಮಾಡಿದ್ದಾರೆ? ಬಸವರಾಜ್ ಬೊಮ್ಮಾಯಿ ಸೋಲಿಸಲು ಏನು ಮಾಡಿದ್ದಾರೆ ಎಂಬುದೆಲ್ಲ ಇತಿಹಾಸ ಇದೆ. ಲೋಕಸಭೆ ಚುನಾವಣೆ ನಂತರ ಅದರ ಬಗ್ಗೆ ಹೇಳುತ್ತೇನೆ ಎಂದು ಯತ್ನಾಳ್ ತಿಳಿಸಿದ್ದಾರೆ.