ಬೆಂಗಳೂರು: ರಾಜ್ಯಾಧ್ಯಕ್ಷ ಹುದ್ದೆಯ ಘೋಷಣೆಯಾಗಿದ್ದಕ್ಕೆ ಬಿಜೆಪಿಯಲ್ಲಿ ಇಷ್ಟೊಂದು ಆಕ್ರೋಶ, ಅಸಹನೆ ತುಂಬಿ ತುಳುಕುತ್ತಿದೆ. ಇನ್ನು ವಿರೋಧ ಪಕ್ಷದ ನಾಯಕನ ಆಯ್ಕೆಯಾದರೆ ಬಿಜೆಪಿಯಲ್ಲಿ ಡೈನಾಮೈಟ್ ಬ್ಲಾಸ್ಟ್ ಆಗುವುದು ಖಂಡಿತ ಎಂದು ಕಾಂಗ್ರೆಸ್ ಟೀಕಿಸಿದೆ.
ಈ ಲೋಕಸಭೆ ಚುನಾವಣೆಯಲ್ಲೇ ಕೇಶವ ಕೃಪಾದ ಬಿಜೆಪಿ, ದವಳಗಿರಿಯ ಬಿಜೆಪಿ ನಡುವೆ ಕುರುಕ್ಷೇತ್ರ ಯುದ್ಧ ಶುರುವಾಗುವುದು ಖಚಿತ.
ವಿಜಯೇಂದ್ರರ ಪದಗ್ರಹಣ, ಬಿಜೆಪಿಗೆ ಹಿಡಿದ ಗ್ರಹಣ. ಬಿಜೆಪಿಯ ಮುಂದಿನ ಸಾಲಿನ ನಾಯಕರೇ ಪದಗ್ರಹಣ ಸಮಾರಂಭಕ್ಕೆ ಗೈರಾಗಿ ನೂತನ ಅಧ್ಯಕ್ಷರ ವಿರುದ್ಧ ಬಂಡಾಯ ಸಾರಿದ್ದಾರೆ. ಸಮಾರಂಭಕ್ಕೆ ರಾಷ್ಟ್ರೀಯ ನಾಯಕರೂ ಪತ್ತೆ ಇಲ್ಲ, ರಾಜ್ಯದ ನಾಯಕರೂ ಪತ್ತೆ ಇಲ್ಲ. ವಿಜಯೇಂದ್ರ ಬಿಜೆಪಿಯೊಳಗಿನ ಕೆಜೆಪಿಯ ಅಧ್ಯಕ್ಷರೇ ಹೊರತು ಬಿಜೆಪಿಯ ಅಧ್ಯಕ್ಷರಲ್ಲ. ಗೈರಾದವರ ಪಟ್ಟಿ ನೋಡುತ್ತಿದ್ದರೆ “ಸಂತೋಷ ಕೂಟ”ದ ಸದಸ್ಯರ ಸಂಖ್ಯೆ ಹೆಚ್ಚುವ ಲಕ್ಷಣವಿದೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.