ಬೆಂಗಳೂರು: ಶಿಗ್ಗಾಂವಿ, ಸಂಡೂರು, ಚನ್ನಪಟ್ಟಣ ಈ ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಸುಳ್ಳು ಆರೋಪ ಮಾಡಿ ಪ್ರಚಾರ ಮಾಡುತ್ತಿದ್ದ ಬಿಜೆಪಿ-ಜೆಡಿಎಸ್ ನಾಯಕರಿಗೆ ಈ ಮೂಲಕ ಜನರು ತಕ್ಕ ಪಾಠ ಕಲಿಸಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿ ನಡೆಸಿದ ಸಿಎಂ ಸಿದ್ದರಾಮಯ್ಯ, ಗ್ಯಾರಂಟಿ ಯೋಜನೆಗಳು ಕೈ ಹಿಡಿದಿದ್ದರಿಂದಲೇ ನಾವು ಗೆದ್ದಿದ್ದೆವೆ. ಉಪಚುನಾವಣೆ ಫಲಿತಾಂಶ ಜನತಾ ನ್ಯಾಯಾಲಯ ನೀಡಿರುವ ತೀರ್ಪು. ಮೂರು ಕ್ಷೇತ್ರಗಳ ಮತದಾರರಿಗೆ ಹಾಘು ಪಕ್ಷದ ಕಾರ್ಯಕರ್ತರಿಗೆ ಧರ್ನ್ಯವಾದಗಳು. ಗೆಲುವು ಸಾಧಿಸಿದ ಮೂರು ಅಭ್ಯರ್ಥಿಗಳಿಗೂ ಅಭಿನಂದನೆಗಳು ಎಂದರು.
ವಕ್ಫ್ ವಿಚಾರದಲ್ಲಿ ಕೋಮುವಿವಾದ ಸೃಷ್ಟಿಸಲು ಬಿಜೆಪಿ ಯತ್ನ ನಡೆಸಿತು. ಬಿಜೆಪಿಯವರು ನಮ್ಮ ಮೇಲೆ ಸುಳ್ಳು ಆರೋಪಗಳನ್ನು ಮಾಡಿದರು. ಆದರೆ ಜನರು ಬುದ್ಧಿವಂತರಿದ್ದಾರೆ. ಚುನಾವಣಾ ಫಲಿತಾಂಶದ ಮೂಲಕ ವಿಪಕ್ಷಗಳಿಗೆ ಉತ್ತರ ನೀಡಿದ್ದಾರೆ ಎಂದರು.
ಗ್ಯಾರಂಟಿ ಯೋಜನೆಗಳ ಬಗ್ಗೆ ಬಿಜೆಪಿ ನಾಯಕರು ಅಪಪ್ರಚಾರ ಮಾಡಿದರು. ಪ್ರಧಾನಿ ಮೋದಿಯವರು ಕೂಡ ಗ್ಯಾರಂಟಿ ಯೋಜನೆ ಟೀಕಿಸಿದರು. ಬಳಿಕ ಅವರೇ ಗ್ಯಾರಂಟಿ ಯೋಜನೆಗಳನ್ನು ಅನುಸರಿಸಲು ಆರಂಭಿಸಿದರು. ನನ್ನ ವಿರುದ್ಧ ಮುಡಾ, ವಾಲ್ಮೀಕಿ ನಿಗಮದ ಹಗರಣಗಳ ಆರೋಪ ಮಾಡಿದರು. ಸುಳ್ಳು ಜಾಹೀರಾತುಗಳನ್ನು ನೀಡಿ ಅಪಪ್ರಚಾರ ಮಾಡಿದರು. ಆದರೂ ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಜನಜರು ಗ್ಯಾರಂಟಿ ಯೋಜನೆಗಳನ್ನು ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ನಮಗೆ ಮತ ಹಾಕಿದ್ದಾರೆ.
ಸಿದ್ದರಾಮಯ್ಯ ಅವರ ಗರ್ವ ಭಂಗ ಮಾಡಬೇಕು, ಸೊಕ್ಕು ಮುರಿಯಬೇಕು ಎಂದು ವಾಗ್ದಾಳಿ ನಡೆಸಿದರು. ಅಳೋದನ್ನೇ ದೊಡ್ಡಗೌಡ ಫ್ಯಾಮಿಲಿ ಅಭ್ಯಾಸ ಮಾಡಿಕೊಂಡಿದೆ. ಅಪ್ಪ, ಮಗ, ಮೊಮ್ಮಗ ಎಲ್ಲರೂ ಗೊಳೋ ಅಂತ ಅಳೋದು. ಎಷ್ಟೇ ಅಪಪ್ರಾಚಾರಗಳನ್ನು ಮಾದಿದರು, ಸುಳ್ಳು ಆರೋಪಗಳನ್ನು ಮಾಡಿದರೂ ಜನರು ಮತದಾನದ ಮೂಲಕ ತಕ್ಕ ಉತ್ತರವನ್ನು ನೀಡಿದ್ದಾರೆ ಎಂದರು.