
ಆರೋಗ್ಯವಂತ ವ್ಯಕ್ತಿಯ ದೇಹದ ಕೊಬ್ಬಿನಂಶ 15 ರಿಂದ 20 ರಷ್ಟು ಇರಬೇಕು. ಜನರು ಮನಸ್ಸಿಗೆ ಬಂದ ಆಹಾರ ಸೇವನೆ ಮಾಡ್ತಾರೆ. ಆದರೆ ಅದನ್ನು ಅರಗಿಸಿಕೊಳ್ಳಲು ಬೇಕಾಗುವಷ್ಟು ಶ್ರಮ ಅಥವಾ ಚಟುವಟಿಕೆ ಮಾಡುವುದಿಲ್ಲ. ಹೀಗಾಗಿ ದೇಹದಲ್ಲಿ ಕೊಬ್ಬು ಉತ್ಪಾದನೆಯಾಗುತ್ತದೆ.
ಅತಿಯಾದ ಕೊಬ್ಬು ದೇಹವನ್ನು ಹಾಳು ಮಾಡುವುದಲ್ಲದೆ, ಮಧುಮೇಹ, ಹೃದ್ರೋಗದಂತಹ ಅನೇಕ ರೋಗಗಳು ಬರಲು ಪ್ರಮುಖ ಕಾರಣವಾಗುತ್ತದೆ. ಒಮ್ಮೆ ಹೆಚ್ಚಾದ ಕೊಬ್ಬನ್ನು ಕರಗಿಸಲು ಬಹಳ ಶ್ರಮ ಪಡಬೇಕಾಗುತ್ತದೆ. ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಿಕೊಳ್ಳಲು ಇಲ್ಲಿದೆ ಸುಲಭ ವಿಧಾನ.
ದೈನಂದಿನ ಡಯಟ್ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಮೊದಲು ಕ್ಯಾರೆಟ್, ಶುಂಠಿಯ ಸಿಪ್ಪೆ ತೆಗೆದು ನಂತರ 2 ಟೊಮೆಟೊ, 2 ಕ್ಯಾರೆಟ್, ಕ್ಯಾಪ್ಸಿಕಂ ಮತ್ತು ಶುಂಠಿಯನ್ನು ಮಿಕ್ಸ್ ಮಾಡಬೇಕು. ಅದನ್ನು ಒಂದು ಗ್ಲಾಸಿಗೆ ಹಾಕಿಕೊಳ್ಳಬೇಕು.
ರುಚಿಗೆ ತಕ್ಕಂತೆ ನಿಂಬೆ ರಸ, ಕಲ್ಲುಪ್ಪು ಹಾಕಿ ಪಾನೀಯ ರೆಡಿ ಮಾಡಿಕೊಳ್ಳಿ. ಜೀರಿಗೆಯನ್ನು ಹುರಿದು ನುಣ್ಣಗೆ ರುಬ್ಬಿಕೊಂಡ ಮಿಶ್ರಣಕ್ಕೆ ಹಾಕಿ. ಈ ಪಾನೀಯವನ್ನು ಬೆಳಗಿನ ತಿಂಡಿ ಅಥವಾ ಊಟದ ಜೊತೆ ಸೇವಿಸಬಹುದು. ಈ ಪಾನೀಯವನ್ನು ಅಗತ್ಯವಿದ್ದಾಗ ಮಾತ್ರ ಮಾಡಿ, ಮುಂಚಿತವಾಗಿ ಮಾಡಿಟ್ಟುಕೊಳ್ಳುವುದು ಬೇಡ.
ಟೊಮೆಟೊದಲ್ಲಿ ಫೈಬರ್ ಇದ್ದು, ಜೀರ್ಣಕ್ರಿಯೆಗೆ ಪ್ರಯೋಜನಕಾರಿ. ಕಾರ್ನಿಟೈನ್ ಎಂಬ ಅಮೈನೋ ಆಸಿಡ್ ಕೂಡ ಇದ್ದು, ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ. ಇದು ಚಯಾಪಚಯವನ್ನು ಹೆಚ್ಚಿಸುತ್ತದೆ. ಕರುಳನ್ನು ಆರೋಗ್ಯವಾಗಿರಿಸುತ್ತದೆ.
ಪ್ರತಿ ದಿನ ಇದರ ಸೇವನೆ ಬೇಸರ ಎನಿಸಿದರೆ ಕೇವಲ ತರಕಾರಿಗಳನ್ನು ಕತ್ತರಿಸಿ ಉಪ್ಪು ಲಿಂಬು ಹಾಕಿ ತಿನ್ನಿ. ಆದರೆ ಈ ಆಹಾರ ಸೇವಿಸಿದ್ರೆ ಮಾತ್ರ ತೂಕ ಕಡಿಮೆಯಾಗುವುದಿಲ್ಲ. ಜಂಕ್ ಫುಡ್ ಮತ್ತು ಕೊಬ್ಬಿನಾಂಶ ಹೆಚ್ಚಿರುವ ಆಹಾರದ ಬಳಕೆ ಆದಷ್ಟು ಕಡಿಮೆ ಮಾಡಬೇಕಾಗುತ್ತದೆ.