ಸ್ವಲ್ಪ ಪೂಜೆ ಹಾಗೂ ಪ್ರಾರ್ಥನೆಗೆ ಪ್ರಸನ್ನನಾಗುವ ದೇವರು ಹನುಮಂತ. ಶ್ರೀರಾಮನ ಭಕ್ತ ಹನುಮಂತನ ಬಗ್ಗೆ ತಿಳಿಯದವರಿಲ್ಲ. ಶನಿವಾರ ಹಾಗೂ ಮಂಗಳವಾರ ಹನುಮಂತನಿಗೆ ಪೂಜೆ ಮಾಡುವುದು ಸರ್ವಶ್ರೇಷ್ಠ ಎಂದು ಭಾವಿಸಲಾಗಿದೆ. ನೆಮ್ಮದಿಯ ಜೀವನ ಬಯಸುವವರು ಶ್ರದ್ಧೆ, ಭಕ್ತಿಯಿಂದ ಹನುಮಂತನ ಪೂಜೆ ಮಾಡಿದ್ರೆ ಸಾಕು.
ಸರ್ವ ಸುಖ, ಗೌರವಗಳಿಗಾಗಿ ಮಂಗಳವಾರ ವೃತ ಮಾಡುವುದು ಬಹಳ ಉತ್ತಮ. ಈ ವೃತದಲ್ಲಿ ಗೋಧಿ ಹಾಗೂ ಬೆಲ್ಲವನ್ನು ಮಾತ್ರ ಸೇವನೆ ಮಾಡಬೇಕು. ರಾತ್ರಿ ಮಾತ್ರ ಭೋಜನ ಮಾಡಬೇಕು. 21 ವಾರಗಳ ಕಾಲ ಈ ವೃತವನ್ನು ಮಾಡಬೇಕಾಗುತ್ತದೆ. ಈ ವೃತದಿಂದ ಮನುಷ್ಯ ಮಾಡಿದ ಎಲ್ಲ ದೋಷಗಳೂ ನಷ್ಟವಾಗುತ್ತವೆ.
ವೃತದ ಪೂಜೆಯ ವೇಳೆ ಕೆಂಪು ಹೂ ಅರ್ಪಣೆ ಮಾಡಬೇಕು. ಹಾಗೆ ಕೆಂಪು ಬಟ್ಟೆಯನ್ನು ಧರಿಸಬೇಕು. ಹನುಮಂತನ ಪೂಜೆ ಮಾಡುವ ಜೊತೆಗೆ ಹನುಮಂತನ ಕಥೆಯನ್ನು ಓದಬೇಕು. ಹನುಮಂತನಿಗೆ ತೆಂಗಿನ ಕಾಯಿ, ಧೂಪದ್ರವ್ಯ, ದೀಪ, ಕುಂಕುಮಗಳನ್ನು ಅರ್ಪಿಸಿ. ನಿಯಮ ಬದ್ಧವಾಗಿ ಮಂಗಳವಾರದ ಪೂಜೆ ಮಾಡುವುದರಿಂದ ಬಂದ ಕಷ್ಟಗಳೆಲ್ಲ ದೂರವಾಗಿ ಸುಖ ಪ್ರಾಪ್ತಿಯಾಗುತ್ತದೆ.