ದೇಹದ ಆರೋಗ್ಯ ಕಾಪಾಡಿಕೊಳ್ಳಲು ಏನೆಲ್ಲ ಕಸರತ್ತು ಮಾಡ್ತೇವೆ. ವ್ಯಾಯಾಮ, ವಾಕಿಂಗ್, ಜಾಗಿಂಗ್ ಹೀಗೆ ನಾನಾ ವಿಧಾನಗಳನ್ನು ಅನುಸರಿಸುತ್ತೇವೆ. ಆದ್ರೆ ಒಂದೇ ಒಂದು ಥೆರಪಿ ಅನೇಕ ರೋಗಗಳಿಂದ ನಿಮ್ಮನ್ನು ದೂರವಿರಿಸುತ್ತದೆ.
ಯಸ್. ನಾವು ಹೇಳ್ತಾ ಇರೋದು ಕ್ಲಾಪಿಂಗ್ ಥೆರಪಿ ಬಗ್ಗೆ. ಸಾಮಾನ್ಯವಾಗಿ ಪ್ರೋತ್ಸಾಹ ನೀಡಲು ಅಥವಾ ಖುಷಿಗೊಳಿಸಲು ನಾವು ಚಪ್ಪಾಳೆ ತಟ್ಟುತ್ತೇವೆ. ಆದ್ರೆ ಇದು ಆರೋಗ್ಯಕ್ಕೆ ಬಹಳ ಒಳ್ಳೆಯದು ಎನ್ನುವ ವಿಷಯ ಅನೇಕರಿಗೆ ತಿಳಿದಿಲ್ಲ. ಚಪ್ಪಾಳೆ ತಟ್ಟುವಾಗ ಕೈಗಳ ಎಲ್ಲ ಬಿಂದುಗಳು ಸ್ಪರ್ಶಿಸುವುದರಿಂದ ಅನೇಕ ರೋಗಗಳು ಕಡಿಮೆಯಾಗುತ್ತವೆ.
ಚಪ್ಪಾಳೆ ತಟ್ಟುವುದರಿಂದ ರಕ್ತ ಸಂಚಾರ ಸುಗಮವಾಗಿ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ. ಮಕ್ಕಳ ಬರವಣಿಗೆಯಲ್ಲಿ ಸಾಕಷ್ಟು ಸುಧಾರಣೆಯಾಗುತ್ತದೆ.
ಡಯಾಬಿಟಿಸ್, ಅಸ್ತಮಾ, ಹೃದಯ ಸಂಬಂಧಿ ಖಾಯಿಲೆ, ಸಂಧಿವಾತದಂತಹ ಖಾಯಿಲೆಯಿಂದ ಮುಕ್ತಿ ಸಿಗುತ್ತದೆ. ಚಪ್ಪಾಳೆ ತಟ್ಟುವುದರಿಂದ ದೇಹಕ್ಕೆ ಆರಾಮ ಸಿಗುತ್ತದೆ.
ಚಪ್ಪಾಳೆಯಿಂದ ಬಿಳಿ ರಕ್ತ ಕಣಗಳು ಹೆಚ್ಚಾಗಿ ರೋಗದಿಂದ ನಮ್ಮ ದೇಹವನ್ನು ರಕ್ಷಣೆ ಮಾಡುತ್ತವೆ. ದೇಹಕ್ಕೆ ಸರಿಯಾದ ಪ್ರಮಾಣದಲ್ಲಿ ಆಮ್ಲಜನಕ ಸಿಗುವ ಜೊತೆಗೆ ದೇಹ ಆರೋಗ್ಯವಾಗಿರುತ್ತದೆ.
ಪ್ರತಿದಿನ ಚಪ್ಪಾಳೆ ತಟ್ಟುವುದರಿಂದ ಶೀತ, ನೆಗಡಿ, ಕೂದಲು ಉದುರುವ ಸಮಸ್ಯೆ, ಶರೀರದಲ್ಲಿ ಕಾಣಿಸಿಕೊಳ್ಳುವ ನೋವು ಕಡಿಮೆಯಾಗುತ್ತದೆ. ಇದ್ರ ಜೊತೆಗೆ ಎಲ್ಲ ಅಂಗಗಳೂ ಆರೋಗ್ಯಕರವಾಗಿರುತ್ತವೆ.