ಸುಸ್ಥಿರ ಇಂಧನ ಕ್ಷೇತ್ರದಲ್ಲಿ ದಾಪುಗಾಲಿಡುತ್ತಿರುವ ಭಾರತವು 2030ರ ವೇಳೆಗೆ ತನ್ನ ಇಂಧನ ಬೇಡಿಕೆಯ ಬಹುಭಾಗವನ್ನು ನವೀಕರಿಸಬಲ್ಲ ಮೂಲಗಳಿಂದಲೇ ಉತ್ಪಾದಿಸಿಕೊಳ್ಳಲಿದೆ ಎಂದು ಲಾರೆನ್ಸ್ ಬರ್ಕ್ಲೆ ನ್ಯಾಷನಲ್ ಲ್ಯಾಬೋರೇಟರಿ (ಬರ್ಕ್ಲೆ ಲ್ಯಾಚ್) ಅಧ್ಯಯನದ ವರದಿ ತಿಳಿಸುತ್ತಿದೆ.
“ಲೀಸ್ಟ್ ಕಾಸ್ಟ್‌ವೇ ಫಾರ್ ಇಂಡಿಯಾಸ್ ಪವರ್ ಸಿಸ್ಟಮ್ ಇನ್ವೆಸ್ಟ್‌ಮೆಂಟ್ಸ್’ ಎಂದ ಹೆಸರಿನ ಪ್ರಕಟಣೆಯೊಂದರಲ್ಲಿ ಬರೆಯಲಾಗಿರುವ ಈ ವರದಿಯಲ್ಲಿ, 2030ರ ವೇಳೆಗೆ ಭಾರತದ ವಿದ್ಯುತ್ ಬೇಡಿಕೆಗಳು ಹೇಗೆಲ್ಲಾ ಪೂರೈಕೆಯಾಗಬಹುದು ಎಂಬ ಬಗ್ಗೆ ತಿಳಿಸಲಾಗಿದೆ.
2030ರ ವೇಳೆಗೆ 500 ಗಿಗಾ ವ್ಯಾಟ್‌ನಷ್ಟು ಇಂಧನ ಸಾಮರ್ಥ್ಯವನ್ನು ಪಳೆಯುಳಿಕೆಯೇತರ ಮೂಲಗಳಿಂದ ಉತ್ಪಾದಿಸುವ ಗುರಿಯನ್ನು ಭಾರತ ಮುಟ್ಟಿದಲ್ಲಿ, ವಿದ್ಯುತ್ ವೆಚ್ಚದಲ್ಲಿ 8-10% ಇಳಿಕೆಯಾಗಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ನವೀಕರಿಸಬಲ್ಲ ಮೂಲಗಳಿಂದ ಉತ್ಪಾದನೆಯಾಗುವ ಶಕ್ತಿ ಹಾಗೂ ಬ್ಯಾಟರಿಗಳ ಬೆಲೆಗಳು ಇಳಿಕೆಯಾಗುತ್ತಾ ಸಾಗಿದಲ್ಲಿ ಈ ಇಳಿಕೆ ಸಾಧ್ಯವಾಗಲಿದೆ.
’ಭರವಸೆ ಕಳೆದುಕೊಳ್ಳಬೇಡಿ, ನಿಮ್ಮಲ್ಲಿ ನೀವು ನಂಬಿಕೆ ಇಡಿ’: ಕಿರಿಯರಿಗೆ ಪ್ರೇರಣಾತ್ಮಕ ಪತ್ರ ಬರೆದಿದ್ದ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್
ಭಾರತದ ವಿದ್ಯುತ್ ಪೂರೈಕೆಯಿಂದ 2020ರಲ್ಲಿ ಆಗುತ್ತಿರುವ ಇಂಗಾಲದ ಹೊರಸೂಸುವಿಕೆಯ ಪ್ರಮಾಣವು, 2030ರ ವೇಳೆಗೆ 43-50%ನಷ್ಟು ಇಳಿಕೆಯಾಗಲಿದೆ ಎಂದು ಸಹ ತಿಳಿಸಲಾಗಿದೆ. ಸದ್ಯ ದೇಶದ ಶಕ್ತಿಯ ಅಗತ್ಯತೆಯ 25% ರಷ್ಟನ್ನು ನವೀಕರಿಸಬಲ್ಲ ಮೂಲಗಳಿಂದ ಉತ್ಪಾದಿಸಲಾಗುತ್ತಿದ್ದು, ಮುಂದಿನ ದಶಕದ ವೇಳೆ ಸಮಗ್ರ ಪ್ರಯತ್ನಗಳ ಮೂಲಕ 50%ವರೆಗೂ ಈ ಪಾಲನ್ನು ಹೆಚ್ಚಿಸಬಹುದು ಎಂದು ಅಧ್ಯಯನ ತಿಳಿಸುತ್ತಿದೆ.
ವ್ಯಾಪಕ ಕೈಗಾರೀಕರಣ ಹಾಗೂ ಹೆಚ್ಚುತ್ತಿರುವ ತಲಾ ಆದಾಯಗಳ ಹಿನ್ನೆಲೆಯಲ್ಲಿ ತನ್ನ ಒಂದೂವರೆ ಶತಕೋಟಿ ಜನಸಂಖ್ಯೆಗೆ ಪೂರೈಕೆ ಮಾಡಲು ಶುದ್ಧ ಇಂಧನ ಉತ್ಪಾದನೆ ಮಾಡುವುದರೊಂದಿಗೆ ಹವಾಮಾನ ಬದಲಾವಣೆಯ ವಿರುದ್ಧವೂ ಸೆಣಸಾಡಬೇಕಿದೆ.
ದೇಶದಲ್ಲಿ ನವೀಕರಿಸಬಲ್ಲ ಇಂಧನದ ಉತ್ಪಾದನಾ ಸಾಮರ್ಥ್ಯವನ್ನು ಪ್ರಸಕ್ತ ಇರುವ 100 ಗಿಗಾ ವ್ಯಾಟ್‌ನಿಂದ 2022ರ ವೇಳೆಗೆ 175 ಗಿಗಾ ವ್ಯಾಟ್‌ಗೆ ಹಾಗೂ 2030ರ ವೇಳೆಗೆ 500 ಗಿಗಾ ವ್ಯಾಟ್‌ಗೆ ಏರಿಸುವುದಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಗ್ಲಾಸ್ಗೌನಲ್ಲಿ ಆಯೋಜಿಸಲಾಗಿದ್ದ ವಿಶ್ವ ಸಂಸ್ಥೆ ಹವಾಮಾನ ಬದಲಾವಣೆ ಶೃಂಗದಲ್ಲಿ ಹೇಳಿದ್ದರು.