ಮನೆಯಲ್ಲಿರುವ ಪ್ರತಿಯೊಂದು ವಸ್ತುವಿಗೂ ಅದರದೇ ಸ್ಥಾನವಿದೆ. ಹಾಗೆ ಮನೆಯನ್ನು ಸ್ವಚ್ಛಗೊಳಿಸುವ ಪೊರಕೆಗೂ ಮಹತ್ವದ ಸ್ಥಾನ ನೀಡಲಾಗಿದೆ. ದೀಪಾವಳಿ ದಿನ ಪೊರಕೆ ಖರೀದಿ ಮಾಡುವುದನ್ನು ಶುಭವೆಂದು ಪರಿಗಣಿಸಲಾಗಿದೆ. ಪೊರಕೆ, ಮನೆಯ ಒಳಗಿರುವ ಎಲ್ಲ ನಕಾರಾತ್ಮಕ ಶಕ್ತಿ ಹಾಗೂ ದರಿದ್ರವನ್ನು ದೂರ ಮಾಡುತ್ತದೆ.
ಕರ್ವಾ ಚೌತ್ ದಿನ ಮನೆಗೆ ಬಂದ ಪತಿಯನ್ನು ಪೊಲೀಸರಿಗೆ ನೀಡಿದ ಪತ್ನಿ
ಶಾಸ್ತ್ರಗಳಲ್ಲಿ ಪೊರಕೆ ಬಗ್ಗೆ ವಿಶೇಷವಾಗಿ ಹೇಳಲಾಗಿದೆ. ಪೊರಕೆಗೆ ಅವಮಾನ ಮಾಡಿದ್ರೆ ದೇವಿ ಲಕ್ಷ್ಮಿ ಮುನಿಸಿಕೊಳ್ತಾಳೆ. ದೀಪಾವಳಿ ಸಂದರ್ಭದಲ್ಲಿಯೊಂದೇ ಅಲ್ಲ ಯಾವ ಸಮಯದಲ್ಲಿಯೂ ಪೊರಕೆಯನ್ನು ಒದೆಯಬಾರದು.
ಪೊರಕೆಯನ್ನು ಎಂದೂ ತೆರೆದ ಸ್ಥಳದಲ್ಲಿ ಇಡಬಾರದು. ಇದು ಅಪಶಕುನವೆಂದು ಭಾವಿಸಲಾಗಿದೆ. ಮರೆತೂ ಮುಖ್ಯ ದ್ವಾರದ ಬಳಿ ಪೊರಕೆಯನ್ನು ಇಡಬಾರದು. ಸದಾ ಪೊರಕೆಯನ್ನು ಮರೆಯಲ್ಲಿಡಬೇಕು.
ಕೋಟ್ಯಾಧಿಪತಿ ಪತಿ ಬಿಟ್ಟು ರಿಕ್ಷಾ ಚಾಲಕನ ಜೊತೆ ಓಡಿ ಹೋದ ಪತ್ನಿ
ಲಕ್ಷ್ಮಿಗೆ ನೀಡು ಗೌರವವನ್ನು ಪೊರಕೆಗೆ ನೀಡಬೇಕು. ಪೊರಕೆಯನ್ನು ನೆಲಕ್ಕೆ ನಿಲ್ಲಿಸಿಡಬಾರದು. ಯಾವಾಗ್ಲೂ ಅದನ್ನು ನೇತು ಹಾಕಬೇಕು.
ಹಾಳಾದ ಪೊರಕೆಯನ್ನು ಎಂದೂ ಸುಡಬಾರದು. ಶನಿವಾರ ಮಾತ್ರ ಹೊಸ ಪೊರಕೆಯನ್ನು ಖರೀದಿ ಮಾಡಬೇಕು.