ದಕ್ಷಿಣ ಆಫ್ರಿಕಾ ತಂಡದ ವಿರುದ್ಧದ ಬಹುನಿರೀಕ್ಷಿತ ಟೆಸ್ಟ್ ಹಾಗೂ ಏಕದಿನ ಸರಣಿಗಾಗಿ ಟೀಂ ಇಂಡಿಯಾ ತಂಡದ ಸದಸ್ಯರು ಎರಡು ದಿನಗಳ ಹಿಂದೆಯೇ ದಕ್ಷಿಣ ಆಫ್ರಿಕಾಗೆ ಬಂದಿಳಿದಿದ್ದಾರೆ. ದಕ್ಷಿಣ ಆಫ್ರಿಕಾಗೆ ಬಂದಿಳಿದ ಒಂದು ದಿನದ ಬಳಿಕ ಟೀಂ ಇಂಡಿಯಾ ಸದಸ್ಯರು ಸರಣಿಯ ಸಿದ್ಧತೆಗಳನ್ನು ಆರಂಭಿಸಿದ್ದಾರೆ.
ದಕ್ಷಿಣ ಆಫ್ರಿಕಾದಲ್ಲಿ ಕೋಚ್ ರಾಹುಲ್ ದ್ರಾವಿಡ್ ನೇತೃತ್ವದಲ್ಲಿ ಟೀಂ ಇಂಡಿಯಾ ತಂಡದ ಆಟಗಾರರು ಕಠಿಣ ಅಭ್ಯಾಸಗಳಲ್ಲಿ ತೊಡಗಿದ್ದಾರೆ. ಈ ಕಠಿಣ ಅಭ್ಯಾಸದ ಸಾಕಷ್ಟು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿ ಕ್ರಿಕೆಟ್ ಅಭಿಮಾನಿಗಳನ್ನು ರಂಜಿಸಿದರೆ ವಿರಾಟ್ ಕೊಹ್ಲಿ ಹಾಗೂ ದ್ರಾವಿಡ್ ಪರಸ್ಪರ ಹೈ ಫೈ ನೀಡುತ್ತಿರುವ ಫೋಟೋಗಳು ಅಭಿಮಾನಿಗಳ ಮನಸ್ಸನ್ನೇ ಕದ್ದಿದೆ.
ಈ ವಿಡಿಯೋ ಹಾಗೂ ಫೋಟೋಗಳನ್ನು ನೆಟ್ಟಿಗರು ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳುವ ಮೂಲಕ ವಿರಾಟ್ ಕೊಹ್ಲಿ ಹಾಗೂ ರಾಹುಲ್ ದ್ರಾವಿಡ್ ಕಾಂಬಿನೇಷನ್ಗಾಗಿ ನಾವು ಎದುರು ನೋಡುತ್ತಿದ್ದೇವೆ ಎಂದು ಹೇಳಿದ್ದಾರೆ. ಓರ್ವ ಅಭಿಮಾನಿಯಂತೂ ಈ ದೃಶ್ಯಗಳು ನನಗೆ ಹೊಟ್ಟೆಯಲ್ಲಿ ಚಿಟ್ಟೆ ಬಿಟ್ಟಂತಹ ಅನುಭವ ನೀಡ್ತಿದೆ ಎಂದು ಹೇಳಿದ್ದಾರೆ.
https://twitter.com/Mansi_vk03/status/1472122492441350148