ಹುಬ್ಬಳ್ಳಿ: ಕಣ್ಣಿಗೆ ಖಾರದಪುಡಿ ಎರಚಿ ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಾಪಾರಿಯೊಬ್ಬರನ್ನು ಬರ್ಬರವಗೈ ಹತ್ಯೆ ಮಾಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಸ್ಯಾಮ್ಯೂಯೆಲ್ ಕೊಲೆಯಾಗಿರುವ ವ್ಯಾಪಾರಿ. ಹುಬ್ಬಳ್ಳಿಯ ಮಂಟೂರಿ ನಿವಾಸಿಯಾಗಿದ್ದ ಸ್ಯಾಮ್ಯುಯೆಲ್, ಹಂದಿ ವ್ಯಪಾರಿಯಾಗಿದ್ದರು. ಹಳೇ ಧ್ವೇಷದ ಹಿನ್ನೆಲೆಯಲ್ಲಿ ದುಷ್ಕರ್ಮಿಗಳು ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಘಟನಾ ಸ್ಥಳಕ್ಕೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಶಶಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆಂಡಿಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.