ಸಿಮ್ ವಿನಿಮಯದ ಸಂಭವನೀಯ ಪ್ರಕರಣವೊಂದರಲ್ಲಿ ಜೈಪುರ ಮೂಲದ ಉದ್ಯಮಿಯೊಬ್ಬರು 64 ಲಕ್ಷ ರೂ. ಕಳೆದುಕೊಂಡಿದ್ದಾರೆ.
ವರದಿಗಳ ಪ್ರಕಾರ, ಉದ್ಯಮಿಯ ಬ್ಯಾಂಕ್ ಖಾತೆಯಿಂದ 64 ಲಕ್ಷ ರೂ. ಗಳನ್ನು ದೋಚಲಾಗಿದೆ. ತಮ್ಮ ಮೊಬೈಲ್‌ನಲ್ಲಿ ಎರಡು ದಿನಗಳಿಂದ ಅನುಮಾನಾಸ್ಪದವಾದ ಸರಣಿ ಚಟುವಟಿಕೆಗಳನ್ನು ಗಮನಿಸುತ್ತಲೇ ಈ ಉದ್ಯಮಿ ಹೀಗೆ ಹಣ ಕಳೆದುಕೊಂಡಿದ್ದಾರೆ. ದರೋಡೆ ಹಿಂದೆ ಫೋನ್ ಹ್ಯಾಕ್ ಮಾಡಿರುವ ಸಾಧ್ಯತೆಗಳನ್ನು ಜೈಪುರ ಪೊಲೀಸರು ತಳ್ಳಿಹಾಕಿಲ್ಲ.
68 ವರ್ಷ ವಯಸ್ಸಿನ ರಾಲೇಶ್ ತಾಟು ತಾವು ಯತ್ನಿಸಿದ ವಹಿವಾಟುಗಳು ವಿಫಲವಾದ ನಂತರ ತಮ್ಮ ಖಾತೆಯಲ್ಲಿರುವ ಬ್ಯಾಲೆನ್ಸ್ ಬಗ್ಗೆ ವಿಚಾರಿಸಲು ಬ್ಯಾಂಕ್‌ಗೆ ಕರೆ ಮಾಡಿದಾಗ ಭಾರೀ ಆಘಾತಕ್ಕೆ ಒಳಗಾಗಿದ್ದರು. ಅವರ ಬ್ಯಾಂಕ್ ಖಾತೆಯಲ್ಲಿ ಕೇವಲ 700 ರೂಪಾಯಿ ಉಳಿದಿದೆ ಎಂದು ಬ್ಯಾಂಕ್‌ನಿಂದ ತಿಳಿದು ಬಂದಿದೆ. ಇದೇ ವೇಳೆ ಕಂಪನಿಯ ಬ್ಯಾಂಕ್ ಖಾತೆಯಲ್ಲಿ ಕೇವಲ 300 ಉಳಿದಿದೆ. ಕೂಡಲೇ ತಾಟುಕಾ ಪೊಲೀಸ್ ದೂರು ದಾಖಲಿಸಿದರು.
ʼಸ್ನಾನʼ ಮಾಡುವ ರೀತಿ ಮೇಲೂ ಅವಲಂಬಿಸಿದೆಯಂತೆ ಆಯುಷ್ಯ….!
ಶುಕ್ರವಾರ ಸಂಜೆ ವೇಳೆಗೆ ತಮ್ಮ ಮೊಬೈಲ್ ಫೋನ್ ಸಂಪರ್ಕ ಕಳೆದುಕೊಂಡಿದೆ ಎಂದು ತಟುಕಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಮ್ಮ ವ್ಯಾಪಾರ ಪಾಲುದಾರರ ಮೊಬೈಲ್ ಫೋನ್‌ನಲ್ಲಿಯೂ ಅದೇ ದೋಷ ಕಂಡುಬಂದಿದೆ ಎಂದು ನಂತರ ತಿಳಿದಿದೆ. ಅನೇಕ ವಿಫಲ ಪ್ರಯತ್ನಗಳ ನಂತರ, ಇಬ್ಬರೂ ತಮ್ಮ ಸಿಮ್ ಕಾರ್ಡ್‌ಗಳನ್ನು ಬದಲಾಯಿಸಲು ನಿರ್ಧರಿಸಿದರು. ತಟುಕಾ ಮತ್ತು ಅವರ ಪಾಲುದಾರ ನಂತರ ಟೆಲಿಕಾಂ ಕಂಪನಿಯ ಕಚೇರಿಗೆ ಭೇಟಿ ನೀಡಿ ತಮ್ಮ ಮೊಬೈಲ್ ಫೋನ್‌ಗಳಿಗಾಗಿ ಎರಡು ಹೊಸ ಸಿಮ್ ಕಾರ್ಡ್‌ಗಳನ್ನು ಪಡೆದರು. ಆದಾಗ್ಯೂ, ಸಕ್ರಿಯಗೊಳಿಸುವಿಕೆ ವಿಳಂಬವಾದ ಕಾರಣ ಅವರಿಗೆ ತಕ್ಷಣವೇ ಹೊಸ ಸಿಮ್ ಕಾರ್ಡ್‌ಗಳನ್ನು ಬಳಸಲು ಸಾಧ್ಯವಾಗಲಿಲ್ಲ.
ತಮ್ಮ ಸಿಮ್ ಕಾರ್ಡ್‌ಗಳತ್ತ ಹೆಚ್ಚು ಗಮನ ಕೊಡದ ವ್ಯಾಪಾರ ಪಾಲುದಾರರು ವಹಿವಾಟು ತಮ್ಮ ಸಂಸ್ಥೆಯ ಬ್ಯಾಂಕ್ ಖಾತೆಗಳಿಗೆ ಲಾಗ್ ಇನ್ ಆಗಿ ವಹಿವಾಟು ಮುಂದುವರೆಸಲು ನೋಡಿದ್ದಾರೆ. ಆದರೆ ಹೀಗೆ ಮಾಡುವ ಮೂಲಕ ಅವರಿಗೆ ತಮ್ಮ ಕಂಪನಿಯ ಬ್ಯಾಂಕ್ ಖಾತೆಗಳನ್ನು ನೋಡಲು ಸಾಧ್ಯವಾಗಲಿಲ್ಲ.ಇದರ ಬೆನ್ನಿಗೇ ತಂತಮ್ಮ ವೈಯಕ್ತಿಕ ಬ್ಯಾಂಕ್ ಖಾತೆಗಳಿಗೆ ಲಾಗ್ ಇನ್ ಮಾಡಲು ಪ್ರಯತ್ನಿಸಿದಾಗ ಅದೂ ಸಾಧ್ಯವಾಗಲಿಲ್ಲ. ನಿರಂತರ ವೈಫಲ್ಯಗಳ ನಂತರ, ಇಬ್ಬರೂ ಪಾಲುದಾರರು ತಮ್ಮ ಬ್ಯಾಂಕ್‌ಗೆ ಕರೆ ಮಾಡಿ ಖಾತೆಯಲ್ಲಿರುವ ಬ್ಯಾಲೆನ್ಸ್ ಬಗ್ಗೆ ವಿಚಾರಿಸಿದರು. ತಮ್ಮ ಸಂಸ್ಥೆಯ ಬ್ಯಾಂಕ್ ಖಾತೆಯಲ್ಲಿ ಕೇವಲ 700 ಮಾತ್ರ ಉಳಿದಿವೆ ಎಂದು ಕೇಳಿ ಶಾಕ್ ಆದರು.
ಪ್ರಸ್ತುತ ತನಿಖೆ ನಡೆಯುತ್ತಿರುವ ಕಾರಣ ನಿಖರವಾಗಿ ಏನನ್ನೂ ನಿರ್ಧರಿಸಲು ಸಾಧ್ಯವಿಲ್ಲ ಎಂದು ಪ್ರಕರಣದ ತನಿಖೆ ನಿರ್ವಹಿಸುತ್ತಿರುವ ಠಾಣಾಧಿಕಾರಿ ಸತೀಶ್ ಚಂದ್ ತಿಳಿಸಿದ್ದಾರೆ. ಎರಡು ಮೊಬೈಲ್ ಫೋನ್‌ಗಳಲ್ಲಿ ಏನಾದರೂ ಹ್ಯಾಕಿಂಗ್ ಆಗಿದೆಯೇ ಎಂದು ನೋಡಲು ಪೊಲೀಸರು ಪ್ರಸ್ತುತ ಅವುಗಳ ತಾಂತ್ರಿಕ ವಿವರಗಳನ್ನು ಪರಿಶೀಲಿಸುತ್ತಿದ್ದಾರೆ. ಇವರ ಮೊಬೈಲ್ ಫೋನ್‌ಗಳು ಇದ್ದಕ್ಕಿದ್ದಂತೆ ಸಂಪರ್ಕ ಕಳೆದುಕೊಂಡಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
“ಎರಡು ಮೊಬೈಲ್ ಫೋನ್‌ಗಳನ್ನು ಏಕಕಾಲದಲ್ಲಿ ಹ್ಯಾಕ್ ಮಾಡುವುದು ಸುಲಭದ ಕೆಲಸವಲ್ಲ. ಆದರೆ ನಾವು ಇನ್ನೂ ಯಾವುದೇ ಸಾಧ್ಯತೆಯನ್ನು ಅಲ್ಲಗಳೆಯುತ್ತಿಲ್ಲ,” ಎಂದು ತನಿಖಾಧಿಕಾರಿಯೊಬ್ಬರು ತಿಳಿಸಿದ್ದಾರೆ.