ಬ್ಯುಸಿನೆಸ್ ಮಾಡುವ ಆಲೋಚನೆಯಲ್ಲಿದ್ದರೆ ನಿಮಗೊಂದು ಮಹತ್ವದ ಸುದ್ದಿಯಿದೆ. ಇತ್ತೀಚಿನ ದಿನಗಳಲ್ಲಿ ಅನೇಕ ಕಂಪನಿಗಳು ಫ್ರಾಂಚೈಸಿಗಳನ್ನು ನೀಡುತ್ತಿವೆ. ಈ ಕಂಪನಿಗಳ ಫ್ರ್ಯಾಂಚೈಸಿ ಪಡೆಯುವ ಮೂಲಕ ಸ್ವಂತ ವ್ಯವಹಾರ ಆರಂಭಿಸಬಹುದು.
ಆಧಾರ್ ಕಾರ್ಡ್ ಫ್ರ್ಯಾಂಚೈಸಿ : ಪ್ರತಿಯೊಬ್ಬ ಭಾರತೀಯರಿಗೂ ಆಧಾರ್ ಕಾರ್ಡ್ ಅತ್ಯಗತ್ಯ ದಾಖಲೆಯಾಗಿದೆ. ಇದಕ್ಕೆ ಸಾಕಷ್ಟು ಬೇಡಿಕೆ ಇದೆ. ಆಧಾರ್ ಕಾರ್ಡ್ ಫ್ರ್ಯಾಂಚೈಸಿ ತೆಗೆದುಕೊಳ್ಳುವ ಮೂಲಕ ಉತ್ತಮ ಹಣ ಗಳಿಸಬಹುದು. ಆಧಾರ್ ಕಾರ್ಡ್ ಫ್ರಾಂಚೈಸಿ ಪಡೆಯಲು, ಯುಐಡಿಎಐ ನಡೆಸುವ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು. ಇದರ ನಂತರ ಸೇವಾ ಕೇಂದ್ರ ತೆರೆಯಲು ಪರವಾನಗಿ ನೀಡಲಾಗುತ್ತದೆ.
ಪರೀಕ್ಷೆಯಲ್ಲಿ ಉತ್ತೀರ್ಣರಾದ ಮೇಲೆ, ಆಧಾರ್ ದಾಖಲಾತಿ ಸಂಖ್ಯೆ ಮತ್ತು ಬಯೋಮೆಟ್ರಿಕ್ ಪರಿಶೀಲನೆಯನ್ನು ಮಾಡಬೇಕಾಗುತ್ತದೆ. ನಂತ್ರ ಸಾಮಾನ್ಯ ಸೇವಾ ಕೇಂದ್ರದಿಂದ ನೋಂದಣಿ ಸಂಖ್ಯೆ ಪಡೆಯಬೇಕು.
ಅಂಚೆ ಕಚೇರಿ ಫ್ರ್ಯಾಂಚೈಸಿ : ಅಂಚೆ ಕಚೇರಿಯ ಫ್ರ್ಯಾಂಚೈಸಿಯನ್ನು ಭಾರತೀಯ ಅಂಚೆ ನೀಡುತ್ತದೆ. ಸರ್ಕಾರಿ ಫ್ರ್ಯಾಂಚೈಸಿ ತೆಗೆದುಕೊಳ್ಳಬಯಸುವವರಿಗೆ ಇದು ಒಳ್ಳೆಯದು. ಯಾರು ಬೇಕಾದರೂ ಈ ಫ್ರ್ಯಾಂಚೈಸಿ ತೆಗೆದುಕೊಳ್ಳಬಹುದು. ಈ ಫ್ರಾಂಚೈಸಿ ತೆಗೆದುಕೊಳ್ಳಲು ಕೇವಲ 5000 ರೂಪಾಯಿಗಳನ್ನು ಖರ್ಚು ಮಾಡಬೇಕಾಗುತ್ತದೆ. ಫ್ರ್ಯಾಂಚೈಸ್ ಪಡೆದ ನಂತ್ರ ಕಮಿಷನ್ ರೂಪದಲ್ಲಿ ಹಣ ಗಳಿಸಬಹುದು.
ಎರಡು ರೀತಿಯ ಫ್ರಾಂಚೈಸಿಗಳನ್ನು ಅಂಚೆ ಕಚೇರಿ ನೀಡುತ್ತದೆ. ಮೊದಲ ಫ್ರಾಂಚೈಸಿ ಔಟ್ಲೆಟ್ ಮತ್ತು ಎರಡನೆಯದು ಪೋಸ್ಟಲ್ ಏಜೆಂಟ್ ಫ್ರಾಂಚೈಸಿ. ಫ್ರಾಂಚೈಸಿಗಾಗಿ ಅರ್ಜಿ ಸಲ್ಲಿಸಲು, ಡೈರೆಕ್ಟ್ ಇಂಡಿಯಾ ಪೋಸ್ಟ್ ವೆಬ್‌ಸೈಟ್‌ಗೆ ಭೇಟಿ ನೀಡಬೇಕು. https://www.indiapost.gov.in/VAS/DOP_PDFFiles/Franchise.pdf ನಲ್ಲಿ ಎಲ್ಲ ಮಾಹಿತಿ ಲಭ್ಯವಿದೆ.