ದುಡಿಯುವ ಛಲ ಹಾಗೂ ಒಳ್ಳೆಯ ಯೋಜನೆಯಿದ್ದಲ್ಲಿ ಸಣ್ಣ ಜಾಗದಲ್ಲೂ ಲಕ್ಷಾಂತರ ರೂಪಾಯಿ ಗಳಿಸಬಹುದು. ನಗರ ಪ್ರದೇಶಗಳಲ್ಲಿ ಸ್ವಂತ ಮನೆ ಹೊಂದಿರುವವರು ಮನೆ ಬಾಡಿಗೆಗೆ ನೀಡಿ ಮಾತ್ರವಲ್ಲ, ಖಾಲಿ ಇರುವ ಟೆರೇಸ್ ನಿಂದಲೂ ಹಣ ಗಳಿಸಬಹುದು. ಈ ವ್ಯವಹಾರಗಳಿಗೆ ಬ್ಯಾಂಕ್ ಸಾಲವನ್ನು ಕೂಡ ನೀಡುತ್ತದೆ.
ಸೌರ ಉದ್ಯಮ : ಪ್ರಪಂಚದಾದ್ಯಂತ ಸೌರ ಶಕ್ತಿಯ ಆಕರ್ಷಣೆ ಹೆಚ್ಚಾಗಿದೆ. ಸರ್ಕಾರ ಕೂಡ ಇದಕ್ಕೆ ಒತ್ತು ನೀಡ್ತಿದೆ. ಟೆರೇಸ್ ನಲ್ಲಿ ಸೋಲಾರ್ ಪ್ಲಾಂಟ್ ಸ್ಥಾಪಿಸಿ, ಹಣ ಗಳಿಸಬಹುದು. ವಿದ್ಯುತ್ ಬಿಲ್ ಉಳಿಯುವುದಲ್ಲದೆ, ವ್ಯವಹಾರವಾಗಿ ಇದನ್ನು ಮಾಡಬಹುದು.
ಟೆರೇಸ್ ಕೃಷಿ : ಟೆರೇಸ್ ಕೃಷಿ ಭಾರತದಲ್ಲಿ ಹೆಚ್ಚು ಜನಪ್ರಿಯವಾಗುತ್ತಿದೆ. ಇದಕ್ಕಾಗಿ, ಕಟ್ಟಡದ ಛಾವಣಿಯ ಮೇಲೆ ಹಸಿರು ಮನೆಯನ್ನು ನಿರ್ಮಿಸಬೇಕಾಗುತ್ತದೆ. ಅಲ್ಲಿ, ತರಕಾರಿ ಬೆಳೆಸಲಾಗುತ್ತದೆ. ಇದನ್ನು ಮಾರಾಟ ಮಾಡಿ ಅನೇಕರು ಈಗಾಗಲೇ ಹಣ ಗಳಿಸುತ್ತಿದ್ದಾರೆ.
ಮೊಬೈಲ್ ಟವರ್ : ಟೆರೇಸ್ ನಲ್ಲಿ ಮೊಬೈಲ್ ಟವರ್ ಗೆ ಜಾಗ ನೀಡಿ ಹಣ ಗಳಿಸಬಹುದು. ಮೊಬೈಲ್ ಕಂಪನಿಗಳಿಗೆ ಟೆರೇಸ್ ಬಾಡಿಗೆಗೆ ನೀಡಬೇಕಾಗುತ್ತದೆ. ಮೊಬೈಲ್ ಟವರ್ ಸ್ಥಾಪಿಸುವ ಮೂಲಕ ಕಂಪನಿಗಳು, ಪ್ರತಿ ತಿಂಗಳು ಆಕರ್ಷಕ ಮೊತ್ತವನ್ನು ನೀಡುತ್ತವೆ. ಸ್ಥಳೀಯ ಮುನ್ಸಿಪಲ್ ಕಾರ್ಪೊರೇಶನ್‌ನಿಂದ ಅನುಮತಿ ಪಡೆಯಬೇಕು.
ಹೋರ್ಡಿಂಗ್ : ಜನದಟ್ಟಣೆ ಹೆಚ್ಚಿರುವ ಜಾಗದಲ್ಲಿ ಮನೆ ಹೊಂದಿದ್ದರೆ, ನಿಮ್ಮ ಟೆರೇಸ್, ಜನರಿಗೆ ಕಾಣುವಂತಿದ್ದರೆ ಹೋರ್ಡಿಂಗ್ ಹಾಕುವ ಮೂಲಕ ನೀವು ಹಣ ಗಳಿಸಬಹುದು. ಜಾಹಿರಾತು ಕಂಪನಿಗಳನ್ನು ಸಂಪರ್ಕಿಸಿ, ಹೋರ್ಡಿಂಗ್ ಹಾಕಬೇಕು. ಇದಕ್ಕೆ ಕಂಪನಿಗಳು ಬಾಡಿಗೆ ನೀಡುತ್ತವೆ.