ನವದೆಹಲಿ: ಆಪ್ ಆಧಾರಿತ ಟ್ಯಾಕ್ಸಿ ಸೇವೆ ಒದಗಿಸುವ ಓಲಾ ಮತ್ತು ಉಬರ್ ಸಂಸ್ಥೆಗಳು ವ್ಯವಹಾರದ ಮಾದರಿಯನ್ನು ಬದಲಿಸಿವೆ. ಚಾಲಕರೊಂದಿಗೆ ತಮ್ಮ ವ್ಯವಹಾರದ ಮಾದರಿ ಬದಲಿಸಿದ್ದು, ಇನ್ನು ಮುಂದೆ ಪ್ರತಿ ರೈಡ್ ಗೆ ಆಟೋ ರಿಕ್ಷಾ ಚಾಲಕರಿಂದ ಪ್ರತಿ ಬಾಡಿಗೆಯಲ್ಲಿ ಕಮಿಷನ್ ಪಡೆಯುವ ಬದಲಿಗೆ ದೈನಂದಿನ, ಸಾಪ್ತಾಹಿಕ ಮತ್ತು ಮಾಸಿಕ ಚಂದಾದಾರಿಕೆ ಪಡೆಯಲಿವೆ.
ನಿಶ್ಚಿತ ಮೊತ್ತದ ಚಂದಾದಾರಿಕೆ ಯೋಜನೆಯಡಿ ಚಾಲಕರು ಪ್ರತಿ ದಿನ, ಅನಿಯಮಿತ ರೈಡ್ ಗಳನ್ನು ಪಡೆಯಬಹುದಾಗಿದೆ. ದೆಹಲಿ, ಬೆಂಗಳೂರು, ಮುಂಬೈ, ಹೈದರಾಬಾದ್ ಸೇರಿದಂತೆ ಅನೇಕ ಮಹಾನಗರಗಳಲ್ಲಿ ಕಳೆದ ವಾರದಿಂದಲೇ ಈ ಸೇವೆಯನ್ನು ಕಂಪನಿಗಳು ಜಾರಿಗೊಳಿಸಿವೆ, ಈಗಾಗಲೇ ರ್ಯಾಪಿಡೋ ಮತ್ತು ನಮ್ಮ ಯಾತ್ರಿ ಈಗಾಗಲೇ ಇದೇ ಮಾದರಿ ಅನುಸರಿಸುತ್ತಿದ್ದು, ಈಗ ಓಲಾ ಮತ್ತು ಉಬರ್ ಕೂಡ ಚಂದಾದರಿಕೆ ಮಾದರಿಯನ್ನು ಜಾರಿಗೊಳಿಸಿವೆ.