ಇತ್ತೀಚಿನ ದಿನಗಳಲ್ಲಿ ಜನರು ಕಚೇರಿಗೆ ಹೋಗುವ ಬದಲು ಮನೆಯಲ್ಲೇ ಮಾಡುವ ಕೆಲಸಕ್ಕೆ ಹೊಂದಿಕೊಳ್ತಿದ್ದಾರೆ. ವರ್ಕ್ ಫ್ರಂ ಹೋಮ್ ಕೆಲಸ ಹುಡುಕುವವರಲ್ಲಿ ಮಹಿಳೆಯರು ಮೊದಲ ಸ್ಥಾನದಲ್ಲಿದ್ದಾರೆ. ಮನೆಯಲ್ಲೇ ಕುಳಿತು ಆರಾಮವಾಗಿ ಮಾಡುವ ಸಾಕಷ್ಟು ವ್ಯವಹಾರವಿದೆ. ಕಂಪನಿಯೊಂದಕ್ಕೆ ಕೆಲಸ ಮಾಡಬೇಕಾಗಿಲ್ಲ. ಸ್ವಂತ ನೀವೇ ಮನೆಯಲ್ಲಿ ವ್ಯಾಪಾರ ನಡೆಸಬಹುದು.
ಫ್ಯಾಷನ್ ಡಿಸೈನ್ : ಇದಕ್ಕೆ ಎಂದೂ ಬೇಡಿಕೆ ಕಡಿಮೆಯಾಗುವುದಿಲ್ಲ. ದಿನಕ್ಕೊಂದು ಫ್ಯಾಷನ್ ಬರುತ್ತಿರುತ್ತದೆ. ಮನೆಯಲ್ಲಿ ಸ್ಟಿಚ್ಚಿಂಗ್ ಮಶಿನ್ ಇದ್ದು, ಬಟ್ಟೆ ಸ್ಟಿಚ್ ಮಾಡುವ ಕಲೆ ನಿಮಗೆ ತಿಳಿದಿದ್ದರೆ, ಮನೆಯಲ್ಲಿಯೇ ಸುಂದರ ಡ್ರೆಸ್ ಸಿದ್ಧಪಡಿಸಿ ಮಾರಾಟ ಮಾಡಬಹುದು.
ಹ್ಯಾಂಡ್ ಬ್ಯಾಗ್ : ಹ್ಯಾಂಡ್ ಬ್ಯಾಗ್ ಕೂಡ ಸದಾ ಬೇಡಿಕೆಯಲ್ಲಿರುವ ವಸ್ತು. ಮಹಿಳೆಯರನ್ನು ಆಕರ್ಷಿಸುತ್ತದೆ. ಮನೆಯಲ್ಲಿಯೇ ನೀವು ಹ್ಯಾಂಡ್ ಬ್ಯಾಗ್ ಸಿದ್ಧಪಡಿಸಿ ಮಾರಾಟ ಮಾಡಬಹುದು. ಇಲ್ಲವೆ ಬೇರೆಯವರಿಂದ ಖರೀದಿ ಮಾಡಿ, ಮನೆಯಲ್ಲಿ ಮಾರಾಟ ಶುರು ಮಾಡಬಹುದು.
ಕೂದಲಿನ ಸೌಂದರ್ಯ ಹೆಚ್ಚಿಸುವ ವಸ್ತು : ಹೆಡ್ ಬ್ಯಾಂಡ್, ಹೇರ್ ಪಿನ್, ಕ್ಲಿಪ್, ಬನ್ ಪಿನ್ಗಳನ್ನು ಮನೆಯಲ್ಲಿಯೇ ತಯಾರಿಸಬಹುದು. ಆನ್ಲೈನ್ ನಲ್ಲಿ ಕೂಡ ಇದನ್ನು ನೀವು ಮಾರಾಟ ಮಾಡಬಹುದು.
ಲೋಗೊ ಟೀ ಶರ್ಟ್ : ಇತ್ತೀಚಿನ ದಿನಗಳಲ್ಲಿ ಈ ಟೀ ಶರ್ಟ್ ಗೆ ಬೇಡಿಕೆ ಹೆಚ್ಚಾಗಿದೆ. ಜನರು ಟೀ ಶರ್ಟ್ ಮೇಲೆ ಲೋಗೋ, ತಮ್ಮ ಫೋಟೋಗಳನ್ನು ಹಾಕಿಕೊಳ್ಳಲು ಇಷ್ಟಪಡ್ತಾರೆ. ಈ ವ್ಯವಹಾರವನ್ನು ಕೂಡ ನೀವು ಮನೆಯಲ್ಲಿಯೇ ಶುರು ಮಾಡಬಹುದು.
ಗೊಂಬೆ : ಮಕ್ಕಳು ಸಾಮಾನ್ಯವಾಗಿ ಗೊಂಬೆಗಳ ಜೊತೆ ಆಟವಾಡ್ತಾರೆ. ಮನೆಯಲ್ಲಿಯೇ ಗೊಂಬೆ ತಯಾರಿಸಿ ಮಾರಾಟ ಮಾಡಬಹುದು. ಗೊಂಬೆ ಮಾರಾಟ ಮಾಡಲು ಸಾಧ್ಯವಿಲ್ಲವೆನ್ನುವವರು ಗೊಂಬೆ ಡ್ರೆಸ್ ಅಥವಾ ಗೊಂಬೆ ಅಲಂಕಾರಿಕ ವಸ್ತುಗಳನ್ನು ತಯಾರಿಸಿ ಮಾರಾಟ ಮಾಡಬಹುದು.