alex Certify ಕೈತುಂಬ ಗಳಿಸಲು ಇಲ್ಲಿದೆ ಅವಕಾಶ..! ಕೇವಲ 10 ಸಾವಿರದೊಳಗೆ ಮನೆಯಲ್ಲೇ ಕುಳಿತು ಶುರು ಮಾಡಿ ಈ ವ್ಯವಹಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೈತುಂಬ ಗಳಿಸಲು ಇಲ್ಲಿದೆ ಅವಕಾಶ..! ಕೇವಲ 10 ಸಾವಿರದೊಳಗೆ ಮನೆಯಲ್ಲೇ ಕುಳಿತು ಶುರು ಮಾಡಿ ಈ ವ್ಯವಹಾರ

ಅನೇಕರು ಸ್ವಂತ ಬ್ಯುಸಿನೆಸ್ ಮಾಡಲು ಬಯಸುತ್ತಿದ್ದಾರೆ. ಆದ್ರೆ ಯಾವ ಬ್ಯುಸಿನೆಸ್ ಶುರು ಮಾಡಬೇಕೆಂಬ ಗೊಂದಲ ಅವರನ್ನು ಕಾಡುತ್ತದೆ. ಆತ್ಮನಿರ್ಭರ್ ಭಾರತ್ ಮಿಷನ್ ಮೂಲಕ ಸುಲಭವಾಗಿ ಈ ಕನಸನ್ನು ನನಸು ಮಾಡಿಕೊಳ್ಳಬಹುದು. ಮನೆಯಲ್ಲೇ ಕುಳಿತು ಕಡಿಮೆ ಬಂಡವಾಳದಲ್ಲಿ ಮಾಡಬಹುದಾದ ಕೆಲ ಕೆಲಸಗಳ ವಿವರ ಇಲ್ಲಿದೆ.

ಉನ್ನತ ಶಿಕ್ಷಣ ಪಡೆದಿರುವವರು ಆನ್‌ಲೈನ್ ಕೋರ್ಸ್‌ಗಳನ್ನು ಪ್ರಾರಂಭಿಸಬಹುದು. ಬ್ಯಾಂಕ್, ಎಸ್‌ಎಸ್‌ಸಿಯಿಂದ ನಾಗರಿಕ ಸೇವೆಗಳ ಪರೀಕ್ಷೆಗೆ ವಿದ್ಯಾರ್ಥಿಗಳು ಆನ್ಲೈನ್  ಶಿಕ್ಷಣ ಪಡೆಯುತ್ತಿದ್ದಾರೆ. ಮಕ್ಕಳ ಶಿಕ್ಷಣಕ್ಕಾಗಿ ಆನ್‌ಲೈನ್ ಶಿಕ್ಷಕರಿಗೂ ಬೇಡಿಕೆ ಇದೆ. ಆನ್ಲೈನ್ ನಲ್ಲಿ ನೀವೂ ಶಿಕ್ಷಣ ನೀಡುವ ಮೂಲಕ ಹಣ ಗಳಿಸಬಹುದು. ಯುಟ್ಯೂಬ್ ಚಾನೆಲ್ ಮೂಲಕವೂ ನೀವು ಮಕ್ಕಳಿಗೆ ಶಿಕ್ಷಣ ನೀಡಬಹುದು. ಇದಕ್ಕೆ ಹೆಚ್ಚಿನ ಬಂಡವಾಳದ ಅಗತ್ಯವಿಲ್ಲ.

ಮನೆಯಲ್ಲಿ ಕುಳಿತು ವ್ಯಾಪಾರ ಮಾಡಲು ಬಯಸಿದರೆ, ಬ್ರೆಡ್ ತಯಾರಿಸಲು ಶುರು ಮಾಡಬಹುದು. ಮನೆಯಲ್ಲಿ ತಯಾರಿಸಿದ ಬ್ರೆಡನ್ನು ಬೇಕರಿ ಅಥವಾ ಮಾರುಕಟ್ಟೆಯಲ್ಲಿ ಸರಬರಾಜು ಮಾಡಬಹುದು. ಇದರಲ್ಲಿ ಹೆಚ್ಚು ಹೂಡಿಕೆ ಮಾಡುವ ಅಗತ್ಯವಿಲ್ಲ. ಲಾಕ್‌ಡೌನ್ ನಂತರ ಬ್ರೆಡ್ ವ್ಯಾಪಾರ ವೇಗ ಪಡೆದುಕೊಂಡಿದೆ. ಕೇವಲ 10,000 ರೂಪಾಯಿಗಳಲ್ಲಿ ಈ ವ್ಯವಹಾರವನ್ನು ಪ್ರಾರಂಭಿಸಬಹುದು. ಇದಕ್ಕಾಗಿ ಗೋಧಿ ಹಿಟ್ಟು ಅಥವಾ ಮೈದಾ, ಉಪ್ಪು, ಸಕ್ಕರೆ, ನೀರು, ಬೇಕಿಂಗ್ ಪೌಡರ್, ಹಾಲಿನ ಪುಡಿ ಮುಂತಾದ ವಸ್ತುಗಳು ಬೇಕಾಗುತ್ತವೆ.

ಯುಟ್ಯೂಬ್ ಚಾನೆಲ್ ಸದ್ಯ ಹೆಚ್ಚು ಪ್ರಸಿದ್ಧಿ ಪಡೆಯುತ್ತಿದೆ. ಜನರು ಕೋಟ್ಯಂತರ ರೂಪಾಯಿ ಸಂಪಾದಿಸುತ್ತಿದ್ದಾರೆ. ನಿಮ್ಮ ವಿಷ್ಯಗಳು ಆಕರ್ಷಕವಾಗಿದ್ದರೆ ಹಾಗೂ ಕ್ಯಾಮರಾ ಮುಂದೆ ನೀವು ಮಾತನಾಡಬಲ್ಲವರಾಗಿದ್ದರೆ ಹೆಚ್ಚು ಹಣ ಗಳಿಸಬಹುದು. ಭಾರತದಲ್ಲಿ ಇಂತಹ ಸಾವಿರಾರು ಚಾನೆಲ್‌ಗಳಿವೆ.

ಜಾಹೀರಾತುಗಳ ಮೂಲಕವೂ ಲಕ್ಷಾಂತರ ರೂಪಾಯಿ ಗಳಿಸಬಹುದು. ಜಾಹೀರಾತುಗಳನ್ನು ರಚಿಸುವ ಬಗ್ಗೆ ನಿಮಗೆ ತಿಳಿದಿದ್ದರೆ ಹಾಗೂ ಸೃಜನಶೀಲರಾಗಿದ್ದರೆ ಜಾಹೀರಾತುಗಳನ್ನು ತಯಾರಿಸಿ, ಮಾರಾಟ ಮಾಡಬಹುದು. ಆನ್ಲೈನ್ ನಲ್ಲಿಯೇ ನೀವು ಈ ವ್ಯವಹಾರ ಶುರು ಮಾಡಬಹುದು. ಇದಕ್ಕೆ ತರಬೇತಿಯ ಅಗತ್ಯವಿರುತ್ತದೆ. ಅನುಭವ ಹೆಚ್ಚಾದಂತೆ ನೀವು ವೆಬ್ಸೈಟ್ ಶುರು ಮಾಡಬಹುದು. ಈ ಕೋರ್ಸ್‌ಗಳು 21 ದಿನಗಳಿಂದ 3 ತಿಂಗಳವರೆಗೆ ಇರುತ್ತದೆ. ಇದಕ್ಕೆ ಹೆಚ್ಚಿನ ಹೂಡಿಕೆ ಅಗತ್ಯವಿರುವುದಿಲ್ಲ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...