alex Certify ಕೇವಲ 10 ಸಾವಿರದಲ್ಲಿ ಈ ವ್ಯವಹಾರ ಶುರುಮಾಡಿ ಗಳಿಸಿ 2 ಲಕ್ಷ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೇವಲ 10 ಸಾವಿರದಲ್ಲಿ ಈ ವ್ಯವಹಾರ ಶುರುಮಾಡಿ ಗಳಿಸಿ 2 ಲಕ್ಷ

ಕೊರೊನಾ ಕಾರಣದಿಂದಾಗಿ ಅನೇಕರು ಕೆಲಸ ಕಳೆದುಕೊಂಡಿದ್ದಾರೆ. ನೌಕರಿ ಬಿಟ್ಟು ಸ್ವಂತ ಉದ್ಯೋಗ ಶುರು ಮಾಡುವ ಯೋಚನೆಯಲ್ಲಿ ಅನೇಕರಿದ್ದಾರೆ. ಸ್ವಂತ ಸಂಪಾದನೆ ಬಯಸುವವರಿಗೆ ಕೃಷಿ ಉತ್ತಮ ಆಯ್ಕೆ. ಕಡಿಮೆ ಅವಧಿಯಲ್ಲಿ ಲಕ್ಷಾಂತರ ರೂಪಾಯಿ ಸಂಪಾದನೆ ಮಾಡಬಹುದು. 10-15 ಲಕ್ಷ ರೂಪಾಯಿ ಹೂಡಿಕೆ ಮಾಡುವ ಮೂಲಕ ಪ್ರತಿ ತಿಂಗಳು 2 ರಿಂದ 3 ಲಕ್ಷ ರೂಪಾಯಿಗಳನ್ನು ಗಳಿಸಬಹುದು.

ಭಾರತದ ಹೆಚ್ಚಿನ ರಾಜ್ಯಗಳಲ್ಲಿ ನುಗ್ಗೆ ಕಾಯಿಗೆ ಹೆಚ್ಚಿನ ಬೇಡಿಕೆಯಿದೆ. ಇದರಲ್ಲಿ ಬಹು-ಜೀವಸತ್ವಗಳು, ಪ್ರೋಟೀನ್, ಅಮೈನೋ ಆಮ್ಲವಿದೆ. ಇದು ಆರೋಗ್ಯ ವೃದ್ಧಿಸುವ ಕಾರಣ ಕಳೆದ ಕೆಲವು ವರ್ಷಗಳಿಂದ ದೇಶದಲ್ಲಿ ಇದಕ್ಕೆ ಬೇಡಿಕೆ ಹೆಚ್ಚಾಗಿದೆ. ಅನೇಕ ಸ್ಟಾರ್ಟ್ಅಪ್ ಗಳು ನುಗ್ಗೆ ಕಾಯಿ  ಸಂಸ್ಕರಿಸುವ ಮೂಲಕ ಹೊಸ ಆರೋಗ್ಯಕರ ಉತ್ಪನ್ನಗಳನ್ನು ತಯಾರಿಸುತ್ತಿವೆ.

ಮಹಾರಾಷ್ಟ್ರದ ನಿವಾಸಿ ಪ್ರಮೋದ್ ಪನ್ಸರೆ ಕೂಡ ಇದೇ ವ್ಯವಹಾರ ಮಾಡುತ್ತಿದ್ದಾರೆ. ಕಳೆದ ಎರಡು ವರ್ಷಗಳಿಂದ ನುಗ್ಗೆ ಕಾಯಿ ಎಲೆಗಳು ಮತ್ತು ಅರಿಶಿನದ ಸಹಾಯದಿಂದ ಅವರು ಚಾಕೊಲೇಟ್‌, ಚಿಕ್ಕಿ ಮತ್ತು ತಿಂಡಿಗಳನ್ನು ತಯಾರಿಸಿ ದೇಶಾದ್ಯಂತ ಮಾರಾಟ ಮಾಡುತ್ತಿದ್ದಾರೆ. ಪ್ರತಿ ತಿಂಗಳು ಪ್ರಮೋದ್ ಮೂರು ಲಕ್ಷ ರೂಪಾಯಿಗಳ ವ್ಯಾಪಾರ ಮಾಡುತ್ತಿದ್ದಾರೆ.

ಮಾಧ್ಯಮ ವರದಿಯ ಪ್ರಕಾರ, ಪ್ರಮೋದ್ ಈ ವ್ಯವಹಾರದಲ್ಲಿ 15 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದರು. ಪ್ರಮೋದ್ ಪ್ರಕಾರ, ಆರಂಭದಲ್ಲಿ ಅವರು ಸ್ಟಾಲ್‌ ಮೂಲಕ  ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದರು. ಉತ್ಪನ್ನಕ್ಕೆ ಬೇಡಿಕೆ ಹೆಚ್ಚಾದಂತೆ  ಚಿಲ್ಲರೆ ವ್ಯಾಪಾರಿಗಳು ಮತ್ತು ದೊಡ್ಡ ಸಗಟು ವ್ಯಾಪಾರಿಗಳನ್ನು ಸಂಪರ್ಕಿಸುವ ಮೂಲಕ ಮಾರ್ಕೆಟಿಂಗ್ ಪ್ರಾರಂಭಿಸಿದ್ರು. ಪ್ರಚಾರಕ್ಕೆ ಸಾಮಾಜಿಕ ಜಾಲತಾಣಗಳನ್ನು ಬಳಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...