
ಸ್ವಂತ ವ್ಯವಹಾರ ಆರಂಭಿಸಲು ಆರ್ಥಿಕ ಸಮಸ್ಯೆ ಅನೇಕರನ್ನು ಕಾಡುತ್ತದೆ. ಹಣ ಹೊಂದಿಸುವ ಪ್ರಶ್ನೆ ಎದುರಾಗುತ್ತದೆ. ವ್ಯವಹಾರ ಶುರು ಮಾಡಲು ಬಯಸುವವರು ಸರ್ಕಾರದ ಯೋಜನೆ ಮೂಲಕ ಸಾಲ ಸೌಲಭ್ಯ ಪಡೆಯಬಹುದು. ಮನೆಯ ಮಹಿಳೆಯ ಹೆಸರಿನಲ್ಲಿ ಮುದ್ರಾ ಯೋಜನೆ ಮೂಲಕ ಸಾಲ ಪಡೆಯಬಹುದು.
ಈ ಯೋಜನೆಯಲ್ಲಿ, 50 ಸಾವಿರ ರೂಪಾಯಿಯಿಂದ 10 ಲಕ್ಷ ರೂಪಾಯಿಗಳ ಸಾಲ ಲಭ್ಯವಿದೆ. ಇದ್ರಲ್ಲಿ ಮೂರು ಬಗೆಯಲ್ಲಿ ಸಾಲ ಸಿಗುತ್ತದೆ. ಶಿಶು, ಕಿಶೋರ್ ಮತ್ತು ತರುಣ್ ಹೆಸರಿನಲ್ಲಿ ಸಾಲ ಸಿಗುತ್ತದೆ. ಶಿಶು ಸಾಲದಲ್ಲಿ 50,000 ರೂಪಾಯಿವರೆಗೆ ಸಾಲ ಸಿಗಲಿದೆ. ಕಿಶೋರ್ ಸಾಲದಲ್ಲಿ 50 ಸಾವಿರದಿಂದ 5 ಲಕ್ಷ ರೂಪಾಯಿ ಮತ್ತು ತರುಣ್ ಸಾಲದಲ್ಲಿ 5 ರಿಂದ 10 ಲಕ್ಷ ರೂಪಾಯಿ ಸಾಲ ಸಿಗಲಿದೆ.
ಮಹಿಳೆಯರಿಗೆ ವಿಶೇಷ ಆದ್ಯತೆ ನೀಡಲಾಗಿದೆ. ಮನೆಯ ಮಹಿಳೆಯ ಹೆಸರಿನಲ್ಲಿ ಸಾಲ ಪಡೆಯುವುದು ಬಹಳ ಮುಖ್ಯ. ಮುದ್ರಾ ಯೋಜನೆಗೆ ಅರ್ಹವಾಗಿರುವ ಸರ್ಕಾರಿ ಮತ್ತು ಖಾಸಗಿ ಬ್ಯಾಂಕಿನ ಶಾಖೆಗೆ ಹೋಗಬೇಕು. ಅಲ್ಲಿ ಸಾಲಕ್ಕೆ ಅರ್ಜಿ ಸಲ್ಲಿಸಬೇಕಾಗುತ್ತದೆ.
ಉದ್ಯಮ ಆರಂಭಿಸುವ ವ್ಯಕ್ತಿಯ ವಯಸ್ಸು 18 ವರ್ಷಗಳಿಗಿಂತ ಹೆಚ್ಚಿರಬೇಕು. ಇದಕ್ಕಿಂತ ಕಿರಿಯ ವ್ಯಕ್ತಿಗೆ ಸಾಲ ನೀಡಲಾಗುವುದಿಲ್ಲ. ಮಾರಾಟಗಾರರು, ವ್ಯಾಪಾರಿಗಳು, ಅಂಗಡಿಯವರು ಮತ್ತು ಇತರ ಕೆಲವು ಸಣ್ಣ ಉದ್ಯಮಿಗಳಿಗೆ ಈ ಸಾಲ ಸೌಲಭ್ಯ ಸಿಗುತ್ತದೆ.
ದೇಶದ ಎಲ್ಲಾ ಸರ್ಕಾರಿ ಬ್ಯಾಂಕುಗಳಿಂದ ಸಾಲ ತೆಗೆದುಕೊಳ್ಳಬಹುದು. ಖಾಸಗಿ ವಲಯದ ಆಕ್ಸಿಸ್ ಬ್ಯಾಂಕ್, ಎಚ್ ಡಿ ಎಫ್ ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಸಿಟಿ ಯೂನಿಯನ್ ಬ್ಯಾಂಕ್, ಡಿಸಿಬಿ ಬ್ಯಾಂಕ್, ಫೆಡರಲ್ ಬ್ಯಾಂಕ್, ಇಂಡಸ್ ಇಂಡ್ ಬ್ಯಾಂಕ್, ಜಮ್ಮು ಮತ್ತು ಕಾಶ್ಮೀರ ಬ್ಯಾಂಕ್, ಕರ್ನಾಟಕ ಬ್ಯಾಂಕ್, ಕರೂರ್ ವೈಶ್ಯ ಬ್ಯಾಂಕ್, ಕೋಟಕ್ ಮಹೀಂದ್ರ, ನೈನಿತಾಲ್ ಬ್ಯಾಂಕ್, ಸೌತ್ ಇಂಡಿಯನ್ ಬ್ಯಾಂಕ್, ಐಡಿಎಫ್‌ಸಿ ಬ್ಯಾಂಕ್ ನಲ್ಲಿ ಸಾಲ ಪಡೆಯಬಹುದು.
ಅಧಿಕೃತ ಸೈಟ್ www.mudra.org.in ಗೆ ಭೇಟಿ ನೀಡುವ ಮೂಲಕ, ಆನ್ಲೈನ್ ನಲ್ಲಿ ಮುದ್ರಾ ಸಾಲಕ್ಕೆ ಅರ್ಜಿ ಸಲ್ಲಿಸಬಹುದು. ಮುದ್ರಾ ಸಾಲದ ಬಗ್ಗೆ https://merisarkarmeredwar.in/ ನಲ್ಲಿ ಮಾಹಿತಿ ಲಭ್ಯವಿದೆ.