ತಮ್ಮ ಪ್ರೀತಿಪಾತ್ರರೊಂದಿಗೆ ಒಂದಷ್ಟು ಕಾಲ ಕಳೆದು ಬರಲೆಂದು ಇಂಗ್ಲೆಂಡ್‌ನ ಫಾರ್ಮ್ಬಿ ಬೀಚ್‌ಗೆ ಹೊರಟ ಮಂದಿಗೆ ತಮ್ಮ ಮೇಲೆ ’ಮರವೊಂದು’ ನೆಗೆದಿದ್ದನ್ನು ಕಂಡು ಶಾಕ್ ಆಗಿದೆ.
ಕಡಲ ತೀರದಲ್ಲಿ ಆಟವಾಡುವುದರ ಮೇಲೆ ತಮ್ಮೆಲ್ಲಾ ಗಮನವಿದ್ದ ಕಾರಣ ಜನರಿಗೆ ದಾರಿಯಲ್ಲಿ ನಿಂತಿದ್ದ ’ಪೊದೆಮಾನವ’ ಕಾಣಲೇ ಇಲ್ಲ. ಹೀಗಾಗಿ ಅಲ್ಲಿಗೆ ಬರುವ ಮಂದಿಗೆ ಪ್ರಾಂಕ್ ಮಾಡಲು ಮುಂದಾದ ಈ ಚೇಷ್ಟೆ ವ್ಯಕ್ತಿ ಮಾಡಿದ ಆಟಗಳು ವಿಡಿಯೋದಲ್ಲಿ ಸೆರೆಯಾಗಿವೆ.
BREAKING: ತಂಟೆಗೆ ಬಂದ್ರೆ ಹುಷಾರ್, ತಾಲಿಬಾನ್ ಸೇರಿ ಉಗ್ರ ಸಂಘಟನೆಗಳಿಗೆ ಭಾರತ ವಾರ್ನಿಂಗ್
ಮರಗಳ ಎಲೆಗಳಿಂದ ಮೈಯೆಲ್ಲಾ ಮುಚ್ಚಿಕೊಂಡು ಬೀಚ್ ಪ್ರವೇಶ ದ್ವಾರದ ಬಳಿ ನಿಂತಿದ್ದ ಈತ ತನ್ನ ಮುಂದೆ ಹಾದು ಹೋಗುತ್ತಿದ್ದ ಮಂದಿಯ ಮೇಲೆ ಜಂಪ್ ಮಾಡುತ್ತಿರುವುದನ್ನು ನೋಡಬಹುದಾಗಿದೆ. ಏನಾಗುತ್ತಿದೆ ಎಂದು ಅರಿವಾಗುವಷ್ಟರಲ್ಲಿ ಶಾಕ್ ಆಗಿಬಿಡುತ್ತಿದ್ದ ಜನ, ಕೆಲ ಕ್ಷಣಗಳ ಬಳಿಕ ಬಿದ್ದು ಬಿದ್ದು ನಕ್ಕಿದ್ದಾರೆ.
ಇಂಗ್ಲೆಂಡ್‌ನ ಮೇರಿಲ್ಯಾಂಡ್‌ನಲ್ಲಿರುವ ಈ ಬೀಚ್ ಸ್ಥಳೀಯರ ಪೈಕಿ ಭಾರೀ ಜನಪ್ರಿಯವಾಗಿದೆ.