ಬೆಂಗಳೂರು : ಕೋವಿಡ್ ವೇಳೆ ರಾಜ್ಯಾದ್ಯಂತ 3,800 ಸರ್ಕಾರಿ ಬಸ್ ರೂಟ್ಗಳನ್ನು ಸ್ಥಗಿತಗೊಳಿಸಲಾಗಿತ್ತು. ಈ ಪೈಕಿ ಬಹುತೇಕ ಕಡೆಗೆ ರೂಟ್ ಬಸ್ಗಳ ಓಡಾಟ ಆರಂಭವಾಗದೆ ಜನರು ಪರದಾಡುವಂತಾಗಿತ್ತು. ಈಗ ಸಾರಿಗೆ ಇಲಾಖೆ ಸ್ಥಗಿತಗೊಳಿಸಿದ್ದ ಬಸ್ ರೂಟ್ಗಳ ಪುನರಾರಂಭಕ್ಕೆ ಚಿಂತನೆ ನಡೆಸಿದೆ.
“ಕೋವಿಡ್ ವೇಳೆ ಸ್ಥಗಿತಗೊಳಿಸಲಾಗಿದ್ದ ಬಸ್ ಸೇವೆ ಪುನರಾರಂಭಿಸಲು ಕ್ರಮ ವಹಿಸಲಾಗುತ್ತಿದೆ. ಹಿಂದಿನ ಸರ್ಕಾರದ ಅವಧಿಯಲ್ಲಿ ನೂತನ ಬಸ್ಗಳನ್ನು ಖರೀದಿಸಿಲ್ಲ. ಇದರಿಂದ ಬಸ್ ಕೊರತೆ ಇದ್ದು, ಈಗ ಖರೀದಿಗೆ ಕ್ರಮವಹಿಸಲಾಗುತ್ತಿದೆ. ಆದಷ್ಟು ಬೇಗ ಸಮಸ್ಯೆ ಬಗೆಹರಿಸಲಾಗುತ್ತದೆ” ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.