
ಹಾಸನ: ಮರದ ಕೊಂಬೆ ಬಡಿದು ಬಸ್ ಪ್ರಯಾಣಿಕ ಮೃತಪಟ್ಟ ಘಟನೆ ನಡೆದಿದೆ. ಬೇಲೂರಿನಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಕೆ.ಎಸ್.ಆರ್.ಟಿ.ಸಿ. ಬಸ್ ಹಿಂಬದಿಗೆ ಮರದ ಕೊಂಬೆ ಬಡಿದಿದೆ.
ಬಸ್ ಹಿಂಬದಿಗೆ ಹಾನಿಯಾಗಿದ್ದು, ಪ್ರಯಾಣಿಕ ಮೃತಪಟ್ಟಿದ್ದಾರೆ. ಮೃತನ ಗುರುತು ಪತ್ತೆಯಾಗಿಲ್ಲ. ಬೇಲೂರು ತಾಲೂಕು ಆಸ್ಪತ್ರೆಯ ಶವಾಗಾರದಲ್ಲಿ ವ್ಯಕ್ತಿಯ ಮೃತದೇಹ ಇರಿಸಲಾಗಿದೆ. ಬಸ್ ತೆರಳುವ ವೇಳೆ ಎದುರಿನಿಂದ ಬಂದ ಟಿಪ್ಪರ್ ಗೆ ದಾರಿ ಬಿಡುವಾಗ ಮರದ ಕೊಂಬೆ ಬಸ್ ಗೆ ಬಡಿದು ಅವಘಡ ಸಂಭವಿಸಿದೆ. ಬೇಲೂರು ಗ್ರಾಮಾಂತರ ಠಾಣೆ ಪೋಲೀಸರು ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.