ಕಲಬುರಗಿ: ಹಿರಿಯ ನಾಗರಿಕರ ಟಿಕೆಟ್ ರಿಯಾಯಿತಿ ಸೌಲಭ್ಯ ಮುಂದುವರಿಕೆ ಮಾಡಲಾಗಿದೆ ಎಂದು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೂರ್ಮರಾವ್ ಎಂ. ತಿಳಿಸಿದ್ದಾರೆ.
ಪ್ರಸ್ತುತ ಕೋವಿಡ್-19 ರ ಪ್ರಕರಣಗಳು ಕಡಿಮೆಯಾಗುತ್ತಿರುವ ಹಿನ್ನೆಲೆ ಹಾಗೂ ಹಿರಿಯ ನಾಗರಿಕರ ಮನವಿ ಮೇರೆಗೆ ಸಂಸ್ಥೆಯ ಬಸ್ ಗಳಲ್ಲಿ ಹಿರಿಯ ನಾಗರಿಕರಿಗೆ ನೀಡುವ ಟಿಕೆಟ್ ರಿಯಾಯಿತಿ ಹಾಗೂ ಪಾಸ್ ದರಗಳಲ್ಲಿನ ರಿಯಾಯಿತಿ ಸೌಲಭ್ಯವನ್ನು ಇದೇ ಡಿಸೆಂಬರ್ 10 ಜಾರಿಗೆ ಬರುವಂತೆ ಪುನರ್ ಪ್ರಾರಂಭಿಸಲಾಗಿದೆ.
ಕೋವಿಡ್-19 ಹಿನ್ನೆಲೆಯಲ್ಲಿ ಈ ಹಿಂದೆ ಸಂಸ್ಥೆಯ ಬಸ್ಸುಗಳಲ್ಲಿ ಹಿರಿಯ ನಾಗರಿಕರಿಗೆ ಒದಗಿಸಿದ ಶೇ.25 ರಷ್ಟು ಟಿಕೆಟ್ ರಿಯಾಯಿತಿ ಸೌಲಭ್ಯವನ್ನು ಹಿಂಪಡೆಯಲಾಗಿತ್ತು. 65 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ತಮ್ಮ ಆರೋಗ್ಯದ ಹಿತದೃಷ್ಟಿಯಿಂದ ಅವಶ್ಯವಿದ್ದಲ್ಲಿ ಮಾತ್ರ ಪ್ರಯಾಣಿಸಬೇಕು. ಹಿರಿಯ ನಾಗರಿಕರು ಇದರ ಸದುಪಯೋಗಪಡಿಸಿಕೊಳ್ಳಬೇಕೆಂದು ಹೇಳಲಾಗಿದೆ.