
ಕಾರ್ಮಿಕ ಇಲಾಖೆಯ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿಸಿರುವ ಫಲಾನುಭವಿಗಳಿಗೆ ಬಸ್‍ಪಾಸ್‍ಗಾಗಿ ಅರ್ಜಿ ಆಹ್ವಾನಿಸಲಾಗಿದೆ ಎಂದು ಬಳ್ಳಾರಿ ವಿಭಾಗ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.
ಫಲಾನುಭವಿಗಳು ತಮ್ಮ ವಾಸಸ್ಥಳಕ್ಕೆ ಹತ್ತಿರದಲ್ಲಿರುವ ಕರ್ನಾಟಕ ಒನ್/ಗ್ರಾಮ ಸೇವಾ ಒನ್ ಸೆಂಟರ್ ಗಳಲ್ಲಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಿ ಉಚಿತವಾಗಿ ಪಾಸ್ ಪಡೆಯಬಹುದು.
ಪಾಸು ಪಡೆದ ಫಲಾನುಭವಿಗಳು ಸ್ಥಳದಿಂದ 45 ಕಿಮೀ ವ್ಯಾಪ್ತಿಯಲ್ಲಿ ಕರಾರಸಾ ನಿಗಮ, ವಾಕರಸಾ ಸಂಸ್ಥೆ, ಕಕರಸಾ ನಿಗಮ ನಗರ, ಸಾಮಾನ್ಯ ಹೊರವಲಯ ಹಾಗೂ ವೇಗದೂತ ಬಸ್ ಗಳಲ್ಲಿ ಪಾಸ್ ಗಳನ್ನು ತೋರಿಸಿ ಉಚಿತವಾಗಿ ಪ್ರಯಾಣಿಸಲು ಅವಕಾಶವಿರುತ್ತದೆ.
ಪಾಸುದಾರರು ಮೂಲ ಪಾಸ್‍ಗಳನ್ನುಮಾತ್ರ ಜೊತೆಯಲ್ಲಿಟ್ಟು ಪ್ರಯಾಣಿಸುವುದು ಕಡ್ಡಾಯವಿರುತ್ತದೆ. ಪಾಸಿನ ನಕಲು ಪ್ರತಿ/ಕಲರ್ ಜೆರಾಕ್ಸ್ ಅಥವಾ ಇತರೆ ಮಾರ್ಪಾಡಿಸಿದ ಪಾಸ್‍ಗಳನ್ನು ನಿಗಮದ ಬಸ್ಸಿನಲ್ಲಿ ಮಾನ್ಯ ಮಾನ್ಯ ಮಾಡಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಕಾರ್ಮಿಕ ಇಲಾಖೆಯ ಉಚಿತ ಸಹಾಯವಾಣಿ ಸಂ.155214 ಗೆ ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.