ಬೆಂಗಳೂರು: ರಾಜ್ಯ ಸರ್ಕಾರದಿಂದ ಸಾರಿಗೆ ಸಂಸ್ಥೆಗಳ ನೌಕರರಿಗೆ ವೇತನ ಬಿಡುಗಡೆ ಮಾಡಲಾಗಿದೆ. 325 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದು, ಇದರಲ್ಲಿ ಏಪ್ರಿಲಿನಲ್ಲಿ ಶೇಕಡ 25 ರಷ್ಟು ಮತ್ತು ಮೇ ತಿಂಗಳಲ್ಲಿ ಶೇಕಡ 75 ರಷ್ಟು ವೇತನ ಸೇರಿದೆ.
ಉಳಿಕೆ ಮೊತ್ತವನ್ನು ನಿಗಮಗಳ ಸ್ವಂತ ಸಂಪನ್ಮೂಲಗಳನ್ನು ಕ್ರೋಢೀಕರಿಸಿ ನೌಕರರಿಗೆ ಪಾವತಿಸುವಂತೆ ತಿಳಿಸಲಾಗಿದೆ.
ವೇತನ ವೆಚ್ಚಕ್ಕಾಗಿ ಪ್ರಸಕ್ತ ಸಾಲಿಗೆ ಶಾಲಾ-ಕಾಲೇಜುಗಳು ಆರಂಭವಾದಲ್ಲಿ ಉಚಿತ ಅಥವಾ ರಿಯಾಯಿತಿ ಪಾಸನ್ನು ವಿತರಿಸಿದರೆ ವೆಚ್ಚವನ್ನು ಸಂಸ್ಥೆ ಇಲ್ಲವೇ ವಿದ್ಯಾರ್ಥಿಗಳಿಂದಲೇ ಭರಿಸಬೇಕಿದೆ ಎಂದು ಹೇಳಲಾಗಿದೆ.
ಸರ್ಕಾರದಿಂದ ಯಾವುದೇ ಸಹಾಯಧನ ನೀಡುವುದಿಲ್ಲ. ಇತರೆ ಬಸ್ ಪಾಸ್ ರಿಯಾಯಿತಿ ಕೂಡ ಈ ಸಾಲಿನಲ್ಲಿ ಲಭ್ಯ ಇರುವುದಿಲ್ಲ ಎಂದು ಹೇಳಲಾಗಿದೆ.
ಸಾರಿಗೆ ನೌಕರರಿಗೆ ಸರ್ಕಾರದಿಂದ ಸಿಹಿಸುದ್ದಿ
ಕಳೆದ ಒಂದು ತಿಂಗಳಿಂದ ಸಂಕಷ್ಟಕ್ಕೆ ಸಿಲುಕಿದ್ದ ಕೆಎಸ್ಆರ್ಟಿಸಿ ನೌಕರರಿಗೆ ರಾಜ್ಯ ಸರ್ಕಾರದಿಂದ ಸಿಹಿ ಸುದ್ದಿ ಸಿಕ್ಕಿದೆ. ಸಾರಿಗೆ ನೌಕರರ ಎರಡು ತಿಂಗಳ ವೇತನ ಬಿಡುಗಡೆ ಮಾಡಲಾಗಿದೆ. ಕರ್ತವ್ಯಕ್ಕೆ ಹಾಜರಾಗಿದ್ದ ನೌಕರರಿಗೆ ಮಾತ್ರ ವೇತನ ಸಿಗಲಿದೆ ಎಂದು ಹೇಳಲಾಗಿದೆ.
ಕೆಎಸ್ಆರ್ಟಿಸಿ, ಬಿಎಂಟಿಸಿ, ವಾಯುವ್ಯ ಕರ್ನಾಟಕ ಮತ್ತು ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಗಳ ನೌಕರರಿಗೆ ಏಪ್ರಿಲ್ ಮತ್ತು ಮೇ ತಿಂಗಳ ವೇತನ ಕ್ಕಾಗಿ 325 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ.