ಬಳ್ಳಾರಿ: 2021ನೇ ಸಾಲಿನಲ್ಲಿ ವಿತರಿಸಲಾದ ಡಿ.31 ರವರೆಗೆ ಮಾನ್ಯತೆ ಇರುವ ವಿಕಲಚೇತನರ ಪಾಸ್ಗಳನ್ನು ನವೀಕರಿಸದೇ ಫೆ.28ರವರೆಗೆ ಮಾನ್ಯ ಮಾಡಲಾಗಿದೆ ಎಂದು ಕಕರಸಾ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.
2021ನೇ ಸಾಲಿನಲ್ಲಿ ವಿತರಣೆ ಮಾಡಿದ ವಿಕಲಚೇತನರ ರಿಯಾಯತಿ ದರದ ಬಸ್ ಪಾಸ್ಗಳನ್ನು ಜ.17ರಿಂದ ಫೆ.28 ರೊಳಗಾಗಿ ಎಲ್ಲಾ ಸೂಕ್ತ ದಾಖಲಾತಿಗಳೊಂದಿಗೆ ಸೇವಾಸಿಂಧು ಪೊರ್ಟಲ್ನಲ್ಲಿ ಅರ್ಜಿ ಸಲ್ಲಿಸಿ ನಂತರ ಸೂಕ್ತ ದಾಖಲಾತಿಗಳೊಂದಿಗೆ 660 ರೂ. ಪಾವತಿಸಿ ಬಳ್ಳಾರಿ ಕೇಂದ್ರಿಯ ಬಸ್ನಿಲ್ದಾಣ ಹಾಗೂ ಸಿರುಗುಪ್ಪದ ಘಟಕದಲ್ಲಿ ವಿಕಲಚೇತನ ಫಲಾನುಭವಿಗಳು ಬಸ್ಪಾಸ್ ನವೀಕರಣ ಮಾಡಿಸಿಕೊಳ್ಳಬಹುದಾಗಿದ್ದು, ಫೆ.28ರ ನಂತರ ಬರುವ ಬಸ್ಪಾಸ್ಗಳನ್ನು ನವೀಕರಿಸಲಾಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ.