ಬೆಂಗಳೂರು: ಅನ್ಲಾಕ್ ನಂತರ ಬಸ್ ಸಂಚಾರ ಆರಂಭವಾಗಿದ್ದು, ಬಿಎಂಟಿಸಿಯಿಂದ ಪ್ರಯಾಣಿಕರಿಗೆ ಸಿಹಿಸುದ್ದಿ ನೀಡಲಾಗಿದೆ.
ಮಾಸಿಕ ರಿಯಾಯಿತಿ ಬಸ್ ಪಾಸ್ ಗಳನ್ನು ವಿತರಿಸಲಾಗುತ್ತಿದೆ. ಬಿಎಂಟಿಸಿ ವತಿಯಿಂದ ಪ್ರಯಾಣಿಕರ ಅನುಕೂಲಕ್ಕಾಗಿ ರಿಯಾಯಿತಿ ದರದ ಪಾಸುಗಳನ್ನು ವಿತರಿಸಲಾಗುತ್ತಿದ್ದು, ಟಿಟಿಎಂಸಿ, ಬಸ್ ನಿಲ್ದಾಣಗಳಲ್ಲಿ, ಬೆಂಗಳೂರು ಒನ್ ಕೇಂದ್ರಗಳಲ್ಲಿ, ಖಾಸಗಿ ಏಜೆನ್ಸಿಗಳ ಮೂಲಕ ಮಾಸಿಕ ಬಸ್ ಪಾಸ್ ಗಳನ್ನು ವಿತರಿಸಲಾಗುತ್ತಿದೆ ಎಂದು ಹೇಳಲಾಗಿದೆ.